Thursday, 19th September 2024

ಡೆಪ್ಯುಟಿ ಸೂಪರಿಟೆಂಡೆಂಟ್‌ ಆಗಿ ಅಧಿಕಾರ ಸ್ವೀಕರಿಸಿದ ಹಿಮಾ ದಾಸ್

ಗುವಾಹಟಿ: ಅಂತರರಾಷ್ಟ್ರೀಯ ಅಥ್ಲೀಟ್ ಹಿಮಾ ದಾಸ್ ಅವರು ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಶುಕ್ರವಾರ ಡೆಪ್ಯುಟಿ ಸೂಪರಿಟೆಂಡೆಂಟ್‌ ಆಗಿ ಅಧಿಕಾರ ಸ್ವೀಕರಿಸಿದರು.

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ಹಿಮಾಗೆ ನೇಮಕಪತ್ರ ಪ್ರದಾನ ಮಾಡಿದರು. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ಶಾಲೆಯ ದಿನಗಳಿಂದಲೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದೆ. ಅದೀಗ ಈಡೇರಿದೆ. ಭಾರತ ದೇಶದ ಅಥ್ಲೆಟಿಕ್ಸ್‌ ತಂಡದಲ್ಲಿ ಮುಂದುವರಿಯುತ್ತೇನೆ. ಅಂತರರಾಷ್ಟ್ರೀಯ ಮತ್ತು ಒಲಿಂಪಿಕ್ ಕೂಟದಲ್ಲಿ ಭಾರತಕ್ಕೆ ಪದಕ ಗೆದ್ದುಕೊಡುವುದು ನನ್ನ ಗುರಿ’ ಎಂದು ಹಿಮಾ ಹೇಳಿದರು.