Saturday, 26th October 2024

Dussehra Rally: ಶಿಂಧೆ vs ಠಾಕ್ರೆ; ಶಿವಸೇನೆ ಎರಡೂ ಬಣಗಳಿಂದ ದಸರಾ ರ್‍ಯಾಲಿ- ಚುನಾವಣೆಗೂ ಮುನ್ನ ಶಕ್ತಿ ಪ್ರದರ್ಶನ

Dussehra rally

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ(Ekanth Shinde) ಅವರ ಶಿವಸೇನೆ ಮತ್ತು ಉದ್ಧವ್ ಠಾಕ್ರೆ(Uddhav Thackeray) ನೇತೃತ್ವದ ಶಿವಸೇನೆ (UBT) ಶನಿವಾರ ಮುಂಬೈನಲ್ಲಿ ದಸರಾ ರ್ಯಾಲಿ(Dussehra Rally)ಗಳನ್ನು ನಡೆಸಲಿದ್ದು, ಆಮೂಲಕ ಎರಡೂ ಪಕ್ಷಗಳೂ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಲಿದೆ. ಶಿವಸೇನೆ (UBT) ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ರ್ಯಾಲಿ ನಡೆಸಲಿದ್ದು, ಶಿಂಧೆ ಬಣ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಸಮಾವೇಶ ನಡೆಸಲಿದೆ

ಶಿಂಧೆ vs ಠಾಕ್ರೆ: ದಸರಾ ರ್‍ಯಾಲಿಗಳಲ್ಲಿ ಶಕ್ತಿ ಪ್ರದರ್ಶನ

ಗುರುವಾರ ರಾತ್ರಿ ಭಾರೀ ಮಳೆಯಿಂದಾಗಿ ಎರಡೂ ಸ್ಥಳಗಳು ಕೆಸರುಮಯವಾಗಿದ್ದವು. ಈ ಬಗ್ಗೆ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಪ್ರತಿಕ್ರಿಯಿಸಿದ್ದು, ರ್ಯಾಲಿಯು ಯೋಜಿಸಿದಂತೆ ಮುಂದುವರಿಯುತ್ತದೆ ಎಂದು ಹೇಳಿದರು. ಶಿಂಧೆ ಆಜಾದ್ ಮೈದಾನದಲ್ಲಿ ಅಯೋಜಿಸಿರುವ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಅಲ್ಲದೇ ಕಾರ್ಯಕ್ರಮಕ್ಕೆ ಬೆಂಬಲಿಗರನ್ನು ಕರೆತರಲು 3,000 ಖಾಸಗಿ ಬಸ್‌ಗಳನ್ನು ಕಾಯ್ದಿರಿಸಲಾಗಿದೆ.

ಎರಡೂ ಬಣಗಳು ರ್ಯಾಲಿಗೂ ಮುನ್ನ ಕಾರ್ಯಕ್ರಮದ ಟೀಸರ್ ವಿಡಿಯೋ ಬಿಡುಗಡೆ ಮಾಡಿವೆ. ಶಿಂಧೆಯವರ ಟೀಸರ್‌ನಲ್ಲಿ ಶಿವಸೇನೆಯನ್ನು ಪ್ರತಿನಿಧಿಸುವ ಹುಲಿಯನ್ನು ಕಾಂಗ್ರೆಸ್‌ಗೆ ಕಟ್ಟಲಾಗಿದ್ದು, ಶಿಂಧೆ ಆ ಹಗ್ಗವನ್ನು ಕತ್ತರಿಸಿರುವುದನ್ನು ತೋರಿಸುತ್ತದೆ. ಶಿವಸೇನೆ (UBT) ಟೀಸರ್ ಮಹಾರಾಷ್ಟ್ರದ ಹೆಮ್ಮೆಯನ್ನು ರಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಬಂಡಾಯ ಶಾಸಕರನ್ನು ಉಲ್ಲೇಖಿಸಿ ದೇಶದ್ರೋಹಿಗಳೆಂದು ಟೀಕಿಸಿದೆ.

ಈ ಬೃಹತ್‌ ರ್ಯಾಲಿಗಳು ರಾಜ್ಯ ಚುನಾವಣೆಗೆ ಇನ್ನೇನು ಕೆಲವೇ ವಾರಗಳಿರುವಾಗ ನಡೆಯುತ್ತಿದೆ. ಪ್ರಸ್ತುತ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಕೊನೆಗೊಳ್ಳಲಿದೆ. ಅದಕ್ಕೂ ಮುನ್ನ ಅಂದರೆ ನವೆಂಬರ್‌ ಮೊದಲ ವಾರದಲ್ಲಿ ನಡೆಯಲಿದೆ.

ದಸರಾ ರ್ಯಾಲಿಗಿದೆ ಇತಿಹಾಸ

1960 ರ ದಶಕದಿಂದಲೂ ದಸರಾ ರ್ಯಾಲಿಗಳು ಶಿವಸೇನೆಗೆ ಪ್ರಮುಖ ಸಂಪ್ರದಾಯವಾಗಿದೆ. ಮೂಲತಃ ಶಿವಾಜಿ ಪಾರ್ಕ್‌ನಲ್ಲಿ ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ನೇತೃತ್ವದಲ್ಲಿ ಈ ರ್ಯಾಲಿಗಳು ನಡೆಯುತ್ತಿದ್ದವು. 2022ರಲ್ಲಿ ಪಕ್ಷ ವಿಭಜನೆಯಾದ ನಂತರ, ಉದ್ಧವ್ ನೇತೃತ್ವದ ಬಣವು ಶಿವಾಜಿ ಪಾರ್ಕ್‌ನಲ್ಲಿ ತನ್ನ ರ್ಯಾಲಿಯನ್ನು ಮುಂದುವರೆಸಿದೆ ಆದರೆ ಶಿಂಧೆ ಅವರ ಬಣವು ಆಜಾದ್ ಮೈದಾನಕ್ಕೆ ಸ್ಥಳಾಂತರಗೊಂಡಿದೆ.

ಈ ಸುದ್ದಿಯನ್ನೂ ಓದಿ: Dasara/ Navaratri Nail Art 2024: ಯುವತಿಯರ ಕೈಬೆರಳುಗಳನ್ನು ಅಲಂಕರಿಸುತ್ತಿರುವ ನವರಾತ್ರಿ ನೇಲ್‌ ಆರ್ಟ್‌