Thursday, 19th September 2024

’ಮಹಾ’ ಮಹಿಳಾ ಪೇದೆಗಳ ಕರ್ತವ್ಯಾವಧಿ ಎಂಟು ಗಂಟೆಗೆ ಇಳಿಕೆ

ಮುಂಬೈ: ಮಹಾರಾಷ್ಟ್ರ ಸರ್ಕಾರವು ಮಹಿಳಾ ಕಾನ್ಸ್‌ಟೇಬಲ್‌ಗಳ ಕರ್ತವ್ಯದ ಅವಧಿಯನ್ನು 12 ಗಂಟೆಯಿಂದ ಎಂಟು ಗಂಟೆಗೆ ಇಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸಮತೋಲನಗೊಳಿಸಲು ಸಹಾಯ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳ ಲಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಂಜಯ್ ಪಾಂಡೆ ಇದನ್ನು ಖಚಿತಪಡಿಸಿದ್ದಾರೆ. ಮೊದಲು ನಾಗ್ಪುರ ನಗರ, ಅಮರಾವತಿ ನಗರ ಮತ್ತು ಪುಣೆ ಗ್ರಾಮಾಂತರದಲ್ಲಿ ಜಾರಿಗೊಳಿಸಲಾಗುವುದು. ಕಳೆದ ತಿಂಗಳು ಮೂರು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಈ ಕ್ರಮವನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಇತರ ನಗರ ಮತ್ತು ಜಿಲ್ಲೆಗಳಲ್ಲೂ ಮಹಿಳಾ ಕಾನ್ಸ್‌ಟೇಬಲ್‌ಗಳ ಕರ್ತವ್ಯದ ಸಮಯ ಕಡಿತಗೊಳಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಮಹಿಳಾ ಕಾನ್ಸ್‌ಟೇಬಲ್‌ಗಳ ಬದ್ಧತೆಗಳನ್ನು ಪರಿಗಣಿಸಿ, ಅವರು ವೃತ್ತಿಪರ ಕರ್ತವ್ಯಗಳಲ್ಲದೆ ಮನೆಯನ್ನೂ ನಿಭಾಯಿಸುವ ಅಗತ್ಯ ಇದೆ. ಹೀಗಾಗಿ, ಒಂದು ತಿಂಗಳ ಹಿಂದೆ ಅವರ ಕೆಲಸದ ಅವಧಿ ಕಡಿತಗೊಳಿಸಲಾಗಿದ್ದು, ಅದು ಉತ್ತಮ ಫಲಿತಾಂಶ ನೀಡಿದೆ ಎಂದು ಹೇಳಿದ್ದಾರೆ.

ಮಹಿಳಾ ಕಾನ್ಸ್‌ಟೇಬಲ್‌ಗಳು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸಲು ಸಹಾಯ ಮಾಡಲು ಈ ಕ್ರಮವನ್ನು ಜಾರಿಗೊಳಿಸ ಲಾಗಿದೆ ಎಂದು ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *