Saturday, 14th December 2024

ಕೇಂದ್ರ ಸಚಿವ ಸಂಪುಟದ ಪುನರ್‌ ರಚನೆ: ಡಿವಿಎಸ್‌ ಔಟ್‌, ಶೋಭಾ ಕರಂದ್ಲಾಜೆ ಇನ್

ನವದೆಹಲಿ : ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ಪುನರ್‌ ರಚನೆ ಬುಧವಾರ ಸಂಜೆ ನಡೆಯಲಿದ್ದು, ಇದರ ನಡುವೆ ಕೇಂದ್ರ ಸಚಿವ ಸದಾನಂದ ಗೌಡ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ, ನಾರಾಯಣ ರಾಣೆ ಸೇರಿದಂತೆ ಸಂಪುಟ ಸೇರುವ 24 ಮಂದಿ ಬೆಳಿಗ್ಗೆಯಿಂದಲೇ ಪ್ರಧಾನಿ ಭೇಟಿಗೆ ಕಾದು ಕುಳಿತಿದ್ದು, ಚಿಕ್ಕ ಮಗಳೂರು ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದ್ದು, ಕರಂದ್ಲಾಜೆ ಕೂಡ ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಜೊತೆ ಮೂವರಿಗೆ ಸಂಪುಟದಲ್ಲಿ ಬಡ್ತಿ ನೀಡಲಾಗುತ್ತದೆ. ಮೀನಾಕ್ಷಿ ಲೇಖಿ, ಅನುಪ್ರಿಯಾ ಪಟೇಲ್‌ , ಶೋಭಾ ಕರಂದ್ಲಾಜೆ, ಸೇರಿದಂತೆ ಐವರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂದು ಹೇಳಲಾಗುತ್ತಿದೆ.