Sunday, 15th December 2024

ಬಿಜೆಪಿ ಸೇರ್ಪಡೆಯಾದ ‘ಮೆಟ್ರೋ ಮ್ಯಾನ್’ ಖ್ಯಾತಿಯ ಇ.ಶ್ರೀಧರನ್

ತಿರುವನಂತಪುರಂ : ‘ಮೆಟ್ರೋ ಮ್ಯಾನ್’ ಎಂದು ಖ್ಯಾತರಾದ ಇ. ಶ್ರೀಧರನ್ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಮಲಪ್ಪುರಂನಲ್ಲಿ ನಡೆದ ಬಿಜೆಪಿ ಯಾತ್ರೆಯಲ್ಲಿ ಸೇರ್ಪಡೆಗೊಂಡಿದ್ದಾರೆ.

ಈ ವೇಳೆ ಮಾತನಾಡಿರುವ ಶ್ರೀಧರನ್, ಬಿಜೆಪಿ ಸೇರ್ಪಡೆಯಾಗುವ ನನ್ನ ನಿರ್ಧಾರ ಜೀವನದ ಹೊಸ ಘಟ್ಟ. ನಾನು ಕೇರಳಕ್ಕೆ ಏನಾದರೂ ಮಾಡಬೇಕೆಂದು ಅಂದುಕೊಂಡಿದ್ದೇನೆ. ಬಿಜೆಪಿ ಸೇರ್ಪಡೆಯಾಗಿರುವುದು ನನ್ನ ಉತ್ತಮ ಆಯ್ಕೆ ಎಂದು ಪಕ್ಷಕ್ಕೆ ಸೇರ್ಪಡೆ ವೇಳೆ ನಡೆಯುತ್ತಿದ್ದ ರ್ಯಾಲಿಯಲ್ಲಿ ತಿಳಿಸಿದ್ದಾರೆ.

88 ವರ್ಷದ ಇವರು ಹಿಂದಿನ ವಾರ ಬಿಜೆಪಿ ಸೇರ್ಪಡೆ ಬಗ್ಗೆ ಮಾಹಿತಿ ಹೊರ ಹಾಕಿದ್ದು, ಈಗ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲಿದ್ದಾರೆ.