Thursday, 5th December 2024

Earthquake: ತೆಲಂಗಾಣದಲ್ಲಿ ಬೆಳ್ಳಂಬೆಳಿಗ್ಗೆ ಕಂಪಿಸಿದ ಭೂಮಿ, 5.3 ತೀವ್ರತೆಯ ಭೂಕಂಪಕ್ಕೆ ಬೆಚ್ಚಿ ಬಿದ್ದ ಜನ

Earthquake

ಹೈದರಾಬಾದ್‌ : ತೆಲಂಗಾಣದ (Telangana) ಮುಲುಗು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭೂಕಂಪನ (Earthquake) ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 5.3 ತೀವ್ರತೆ ದಾಖಲಾಗಿದೆ. ಹೈದರಾಬಾದ್‌ನಾದ್ಯಂತ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ಬೆಳಗ್ಗೆ 7:27ರ ವೇಳೆಗೆ ಈ ಭೂಕಂಪ ಸಂಭವಿಸಿದ್ದು, ಸುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಯಾವುದೇ ಪ್ರಾಣಹಾನಿ ಆದ ಬಗ್ಗೆ ವರದಿಯಾಗಿಲ್ಲ.

ಜಾಗರೂಕರಾಗಿರಲು ಮತ್ತು ಭೂಕಂಪಗಳ ಸಮಯದಲ್ಲಿ ಕಿಕ್ಕಿರಿದ ಅಥವಾ ಅಸುರಕ್ಷಿತ ಕಟ್ಟಡಗಳಿಂದ ದೂರವಿರುವಂತೆ ತಜ್ಞರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಅಧಿಕಾರಿಗಳು ವಿಜ್ಞಾನಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಹೈದರಾಬಾದ್, ಹನ್ಮಕೊಂಡ, ವಾರಂಗಲ್, ಖಮ್ಮಂ, ರಂಗಾರೆಡ್ಡಿ, ಹೈದರಾಬಾದ್ ಮತ್ತು ಭದ್ರಾದ್ರಿ ಕೊಟ್ಟಗುಡೆಂನಲ್ಲಿ ಇದೇ ರೀತಿಯ ಕಂಪನದ ಅನುಭವವಾಗಿದೆ. ಭಯಕ್ಕೆ ಜನರು ಮನೆ ಬಿಟ್ಟು ಹೊರಗಡೆ ಬಂದಿದ್ದಾರೆ. 2024 ರ ಮಾರ್ಚ್ 14 ರಂದು ಆಂಧ್ರಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿತ್ತು.

ಅಕ್ಟೋಬರ್ 12 ರಾತ್ರಿ ಭೂಕಂಪ 2022 ಸಂಭವಿಸಿತ್ತು.ಆದಿಲಾಬಾದ್ ಜಿಲ್ಲೆಯ ಉಟ್ನೂರಿನಲ್ಲಿ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಜನರು ಆತಂಕಗೊಂಡಿದ್ದರು. 13 ಜುಲೈ 2022 ರಂದು ನೆಲ್ಲೂರು ಮತ್ತು ಕಡಪ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿತ್ತು. ಕಂಡ್ರಿಕ, ಪಡಮಟ ನಾಯ್ಡುಪಲ್ಲಿ, ಚಿಲಕಪಾಡು, ಕೃಷ್ಣಾಪುರ ಮತ್ತಿತರ ಗ್ರಾಮಗಳಲ್ಲಿ ಭೂಮಿ ಕಂಪಿಸಿತ್ತು.

ಭಾರತದಲ್ಲಿ ನಾಲ್ಕು ಭೂಕಂಪನ ವಲಯಗಳನ್ನು ಗುರುತಿಸಲಾಗಿದ್ದು, ವಲಯ 2, ವಲಯ 3, ವಲಯ 4, ಮತ್ತು ವಲಯ 5 ಎಂದು ಹೇಳಲಾಗಿದೆ. ವಲಯ 5 ಅತ್ಯಧಿಕ ಮಟ್ಟದ ಭೂಕಂಪನವನ್ನು ಎದುರಿಸುತ್ತದೆ. ವಲಯ 2 ರಲ್ಲಿ ಅತೀ ವಿರಳವಾಗಿ ಭೂ ಕಂಪನಗಳು ಸಂಭವಿಸುತ್ತವೆ. ತೆಲಂಗಾಣವನ್ನು ವಲಯ 2ರಲ್ಲಿ ವರ್ಗೀಕರಿಸಲಾಗಿದ್ದು, ಇದು ಕಡಿಮೆ ತೀವ್ರತೆಯ ವಲಯವಾಗಿದೆ.

ಇತ್ತೀಚೆಗೆ ಪಶ್ಚಿಮ ಘಟ್ಟದ ಕೆಲ ಭಾಗಗಳಲ್ಲಿಯೂ ಭೂಮಿ ಕಂಪಿಸಿದ್ದು, ಜನ ಜನರಲ್ಲಿ ಭಯ ಉಂಟು ಮಾಡಿತ್ತು.

ಈ ಸುದ್ದಿಯನ್ನೂ ಓದಿ : Earthquake: ಪಶ್ಚಿಮ ಘಟ್ಟದಲ್ಲಿ ಭೂಕಂಪದ ಅನುಭವ, ಜನ ಭಯಭೀತ