Sunday, 15th December 2024

ಛತ್ತೀಸ್ ಗಢದಲ್ಲಿ ಭೂಕಂಪ: ಶೇ.3ರಷ್ಟು ತೀವ್ರತೆ

ನವದೆಹಲಿ: ಛತ್ತೀಸ್ ಗಢದ ಉತ್ತರ ಭಾಗದಲ್ಲಿ ಗುರುವಾರ ಭೂಕಂಪ ಸಂಭ ವಿಸಿದೆ. ರಿಕ್ಟರ್ ಮಾಪಕದಲ್ಲಿ ಶೇ.3ರಷ್ಟು ತೀವ್ರತೆ ದಾಖಲಾಗಿದೆ.

ಸೂರಜ್ ಪುರ್ ನಲ್ಲಿ ಭೂಕಂಪ ಸಂಭವಿಸಿದ್ದು, ಸುಮಾರು ಹತ್ತು ಕಿಲೋ ಮೀಟರ್ ಗಳಷ್ಟು ದೂರದವರೆಗೆ ಭೂಕಂಪನ ಸಂಭವಿಸಿದೆ ಎಂದು ವರದಿ ವಿವರಿಸಿದೆ. ಜಪಾನ್ ನಲ್ಲೂ 5.6ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ ಎಂದು ವರದಿ ಹೇಳಿದೆ.

ಗುಜರಾತ್ ನ ಕಛ್ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿತ್ತು. ಆದರೆ ಯಾವುದೇ ಸಾವು, ನೋವು, ಹಾನಿಯ ಬಗ್ಗೆ ವರದಿಯಾಗಿಲ್ಲ.