Saturday, 14th December 2024

ತೇಜ್‌ಪುರದಲ್ಲಿ ಭೂಕಂಪನ: 3.8ರಷ್ಟು ಕಂಪನದ ತೀವ್ರತೆ

ಅಸ್ಸಾಂ: ಅಸ್ಸಾಂನ ತೇಜ್‌ಪುರದಲ್ಲಿ ಸೋಮವಾರ ಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.8ರಷ್ಟು ಕಂಪನದ ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಬೆಳಗ್ಗೆ ಭೂಗರ್ಭದ 24 ಕಿಲೋಮೀಟರ್ ಆಳದಲ್ಲಿ ಭೂ ಕಂಪಿಸಿದ್ದು, ಭೂಕಂಪದ ಕೇಂದ್ರಬಿಂದು ತೇಜ್‌ಪುರದ ಪಶ್ಚಿಮಕ್ಕೆ 44 ಕಿಲೋಮೀಟರ್ ದೂರದಲ್ಲಿದೆ. ಭಾನುವಾರ ಮಧ್ಯಾಹ್ನವೂ ಭೂ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ಇತ್ತು. ಭೂಕಂಪ ದಿಂದ ಉಂಟಾಗಿರುವ ಸಾವುನೋವು, ನಷ್ಟದ ಬಗ್ಗೆ ವರದಿಯಾಗಿಲ್ಲ.