ನವದೆಹಲಿ: ರಾಜಸ್ಥಾನದ ಬಿಕಾನೇರ್‌ನಲ್ಲಿ ಬುಧವಾರ ಬೆಳಗ್ಗೆ 5.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪನ ವೀಕ್ಷಣಾ ಕೇಂದ್ರ ಪ್ರಕಾರ, ಬಿಕಾನೇರ್‌ನಲ್ಲಿ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿ ತಿಳಿಸಿದೆ.
ಮೇಘಾಲಯದ ಪಶ್ಚಿಮ ಗ್ಯಾರೋ ಹಿಲ್ಸ್ ಮತ್ತು ಲಡಾಖ್‌ನಲ್ಲಿಯೂ ಬುಧವಾರ ಭೂಮಿ ಕಂಪಿಸಿದ ಅನುಭವವಾಗಿದೆ. ಪಶ್ಚಿಮ ಗ್ಯಾರೋ ಹಿಲ್ಸ್‌ನಲ್ಲಿ 4.1ರಷ್ಟು ಹಾಗೂ ಲಡಾಖ್‌ನಲ್ಲಿ 3.6 ರಷ್ಟು ತೀವ್ರತೆಯ ಭೂಕಂಪ ದಾಖಲಾಗಿರುವುದಾಗಿ ಎನ್‌ಸಿಎಸ್ ಮಾಹಿತಿ ನೀಡಿದೆ.
ವರದಿಯ ಪ್ರಕಾರ, ಭೂಕಂಪದ ಕೇಂದ್ರ ಬಿಂದು ಪಶ್ಚಿಮ ಗ್ಯಾರೊ ಹಿಲ್ಸ್ ಆಗಿದೆ. ವಾರದ ಹಿಂದಷ್ಟೇ ಮಣಿಪುರದ ಉಖ್ರುಲ್‌ನಲ್ಲಿ 4.5 ತೀವ್ರತೆಯ ಭೂಕಂಪ ದಾಖಲಾಗಿತ್ತು.