Friday, 22nd November 2024

ಹರಿಯಾಣದ ಜಜ್ಜರ್‌ನಲ್ಲಿ ಭೂಕಂಪನ: 3.3ರಷ್ಟು ತೀವ್ರತೆ

ನವದೆಹಲಿ: ಕಳೆದ ಶುಕ್ರವಾರ ತಡರಾತ್ರಿ ಹರಿಯಾಣದ ಜಜ್ಜರ್‌ನಲ್ಲಿ ಭೂಕಂಪನದ ಅನುಭವ ವಾಗಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.3ರಷ್ಟು ದಾಖಲಾಗಿದೆ.

ರಾತ್ರಿ 8:15ಕ್ಕೆ ಕಂಪನದ ಅನುಭವವಾಯಿತು ಎಂದು ವರದಿ ಮಾಡಿದ್ದು, ಭೂಕಂಪದಿಂದ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಅಕ್ಟೋಬರ್ 31 ರಂದು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಸಿರೊಂಚಾ ತಾಲೂಕಿನಲ್ಲಿ 4.3 ತೀವ್ರತೆಯ ಭೂಕಂಪದ ಅನುಭವವಾಗಿತ್ತು.

ಭೂಕಂಪನದ ಕೇಂದ್ರಬಿಂದುವು ಮೇಲ್ಮೈಯಿಂದ 77 ಕಿ.ಮೀ ಆಳದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರಕ್ಕೆ ತಿಳಿಸಲಾಗಿದೆ. ತೆಲಂಗಾಣ ಗಡಿಯಲ್ಲಿರುವ ಪ್ರಾಣಹಿತ ನದಿ ಸಮೀಪದ ಜಫ್ರಾಬಾದ್ ಚಾಕ್ ಗ್ರಾಮದಲ್ಲಿ ಭೂಕಂಪನ ಅನುಭವವಾಗಿದೆ.