Saturday, 23rd November 2024

ಲಡಾಖ್​ನ ಕಾರ್ಗಿಲ್​​ನಲ್ಲಿ ಭೂಕಂಪನ

ಕಾರ್ಗಿಲ್​: ಲಡಾಖ್​ನ ಕಾರ್ಗಿಲ್​​ನಲ್ಲಿ ಗುರುವಾರ ಬೆಳಗ್ಗೆ ಭೂಕಂಪನ ಸಂಭವಿಸಿರುವುದಾಗಿ ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.

ಬೆಳಗ್ಗೆ 9.22ಕ್ಕೆ ಉಂಟಾದ ಭೂಕಂಪನದ ಕೇಂದ್ರ ಬಿಂದು 10 ಕಿ.ಮೀ ಆಳದಲ್ಲಿದ್ದು, ರಿಕ್ಟರ್​ ಮಾಪಕ ದಲ್ಲಿ 4.2ರಷ್ಟು ತೀವ್ರತೆ ದಾಖಲಾಗಿದೆ. ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.

ಕಳೆದ 72 ಗಂಟೆಗಳಲ್ಲಿ ಲಡಾಖ್ ನಲ್ಲಿ ಸಂಭವಿಸಿದ ಎರಡನೇ ಭೂಕಂಪನ ಇದಾಗಿದೆ. ಕಳೆದ ಅಕ್ಟೋಬರ್​ 6 ರಂದು 5.1 ತೀವ್ರತೆಯ ಭೂಕಂಪನ ಸಂಭವಿಸಿತ್ತು.