ಪಿಥೋರಗಢದಲ್ಲಿ 4.3 ತೀವ್ರತೆ ಭೂಕಂಪ Wednesday, November 9th, 2022 ವಿಶ್ವವಾಣಿ ಪಿಥೋರಗಢ (ಉತ್ತರಾಖಂಡ): ಉತ್ತರಾಖಂಡದ ಪಿಥೋರಗಢದಲ್ಲಿ ಇಂದು ಬೆಳಗ್ಗೆ 4.3 ತೀವ್ರತೆಯ ಭೂಕಂಪ ಸಂಭವಿಸಿದ ಎಂದು ವರದಿಯಾಗಿದೆ. ನೇಪಾಳದಲ್ಲಿ ಇಂದು ಮುಂಜಾನೆ 1:57 ಕ್ಕೆ 6.3 ತೀವ್ರತೆಯ ಭೂಕಂಪ ಸಂಭವಿ ಸಿದ ನಂತರ, ಉತ್ತರಾಖಂಡದ ಪಿಥೋರಗಢದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಅಷ್ಟೇ ಅಲ್ಲದೇ, ದೆಹಲಿ-ಎನ್ಸಿಆರ್ನ ಕೆಲವು ಭಾಗಗಳಲ್ಲೂ ಕಂಪನದ ಅನುಭವವಾಗಿದೆ. ಉತ್ತರಾಖಂಡದ ಪಿಥೋರಗಢದಲ್ಲಿ ಭೂಮಿ ಯಿಂದ 5 ಕಿಮೀ ಆಳದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆʼ ಎಂದು ರಾಷ್ಟ್ರೀಯ ಭೂಕಂಪನ ವಿಜ್ಞಾನ ಟ್ವೀಟ್ ಮಾಡಿದೆ.