Sunday, 15th December 2024

ಪಿಥೋರಗಢದಲ್ಲಿ 4.3 ತೀವ್ರತೆ ಭೂಕಂಪ

ಪಿಥೋರಗಢ (ಉತ್ತರಾಖಂಡ): ಉತ್ತರಾಖಂಡದ ಪಿಥೋರಗಢದಲ್ಲಿ ಇಂದು ಬೆಳಗ್ಗೆ 4.3 ತೀವ್ರತೆಯ ಭೂಕಂಪ ಸಂಭವಿಸಿದ ಎಂದು ವರದಿಯಾಗಿದೆ.

ನೇಪಾಳದಲ್ಲಿ ಇಂದು ಮುಂಜಾನೆ 1:57 ಕ್ಕೆ 6.3 ತೀವ್ರತೆಯ ಭೂಕಂಪ ಸಂಭವಿ ಸಿದ ನಂತರ, ಉತ್ತರಾಖಂಡದ ಪಿಥೋರಗಢದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಅಷ್ಟೇ ಅಲ್ಲದೇ, ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲೂ ಕಂಪನದ ಅನುಭವವಾಗಿದೆ.

ಉತ್ತರಾಖಂಡದ ಪಿಥೋರಗಢದಲ್ಲಿ ಭೂಮಿ ಯಿಂದ 5 ಕಿಮೀ ಆಳದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆʼ ಎಂದು ರಾಷ್ಟ್ರೀಯ ಭೂಕಂಪನ ವಿಜ್ಞಾನ ಟ್ವೀಟ್ ಮಾಡಿದೆ.