Sunday, 15th December 2024

ವಿಶಾಖಪಟ್ಟಣಂನಲ್ಲಿ 3.4 ತೀವ್ರತೆ ಭೂಕಂಪನ

ವಿಶಾಖಪಟ್ಟಣ : ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಭಾನುವಾರ ಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕ ದಲ್ಲಿ 3.4 ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.

ವಿಶಾಖಪಟ್ಟಣದ ವೈಜಾಗ್ ನ ಅನೇಕ ಭಾಗಗಳಲ್ಲಿ ಬೆಳಿಗ್ಗೆ ಭೂ ಕಂಪನದ ಅನುಭವವಾಗಿದೆ. ಭಯಭೀತರಾದ ಜನರು ತಮ್ಮ  ಮನೆಗಳಿಂದ ಹೊರಬಂದು ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಯಲ್ಲಿ ಜಮಾಯಿಸಿದರು.

ಸೀತಮ್ಮಧಾರಾ, ಅಲ್ಲಿಪುರಂ ಬಂಗಾರಮ್ಮ ಮೆಟ್ಟಾ ಮತ್ತು ವೇಪಗುಂಟಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಪೆಂಡೂರ್ತಿ ಮತ್ತು ಸಿಂಹಾಚಲಂನಲ್ಲಿಯೂ ಭೂಕಂಪ ಸಂಭವಿಸಿದೆ.