Sunday, 15th December 2024

ಬಾರಾಮುಲ್ಲಾದಲ್ಲಿ 4.9 ತೀವ್ರತೆಯ ಮಧ್ಯಮ ಭೂಕಂಪ

ವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮಂಗಳವಾರ 4.9 ತೀವ್ರತೆಯ ಮಧ್ಯಮ ಭೂಕಂಪ ಸಂಭವಿಸಿದೆ.

ಸಾವುನೋವುಗಳು ಅಥವಾ ಯಾವುದೇ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ. ಈ ವರ್ಷದ ಜುಲೈನಲ್ಲಿ ಬಾರಾಮುಲ್ಲಾದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮಧ್ಯಾಹ್ನ 12.26 ಕ್ಕೆ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

ಈ ತಿಂಗಳ ಆರಂಭದಲ್ಲಿ, ಫರಿದಾಬಾದ್ ಜಿಲ್ಲೆಯನ್ನು ನಡುಗಿಸಿದ ಎರಡು ಭೂಕಂಪಗಳಿಂದ ಹರಿಯಾಣದ ನಿವಾಸಿಗಳು ಬೆಚ್ಚಿಬಿದ್ದಿದ್ದರು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಬೆಳಿಗ್ಗೆ 10:54 ರ ಸುಮಾರಿಗೆ ಮೊದಲ ಭೂಕಂಪನದ ಅನುಭವವಾಯಿತು, ನಂತರ ಬೆಳಿಗ್ಗೆ 11:43 ಕ್ಕೆ ಎರಡನೇ ಭೂ ಕಂಪನ ಸಂಭವಿಸಿದೆ. ದೆಹಲಿ-ಎನ್ಸಿಆರ್ ಪ್ರದೇಶದಾದ್ಯಂತ ಹಲವಾರು ಪ್ರದೇಶಗಳಲ್ಲಿ ಭೂಕಂಪನಗಳು ವರದಿಯಾಗಿವೆ, ಆದರೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.