Sunday, 15th December 2024

‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ಜಾರಿಗೆ ಸಿದ್ದ: ಚುನಾವಣಾ ಆಯೋಗ

ನವದೆಹಲಿ : ‘ಒನ್ ನೇಷನ್, ಒನ್ ಎಲೆಕ್ಷನ್’ ವ್ಯವಸ್ಥೆ ಜಾರಿಗೆ ತರಲು ಭಾರತೀಯ ಚುನಾವಣಾ ಆಯೋಗ ಸಿದ್ಧವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಹೇಳಿದರು.

ಶಾಸನಸಭೆಯ ಎಲ್ಲಾ ವ್ಯಾಪಕ ತಿದ್ದುಪಡಿಗಳ ನಂತರ, ಒನ್ ನೇಷನ್ ಒನ್ ಚುನಾವಣೆಗೆ ಭಾರತ ಚುನಾವಣಾ ಆಯೋಗ ಸಿದ್ಧವಾಗಿದೆ’ ಎಂದು ಹೇಳಿದರು. ‘ಒಂದು ದೇಶ, ಒಂದು ಚುನಾವಣೆ’ ಎಂಬ ಪರಿಕಲ್ಪನೆಯನ್ನು ಪಿಎಂ ನರೇಂದ್ರ ಮೋದಿ ಅನುಮೋದಿಸಿದ ಒಂದು ತಿಂಗಳ ನಂತರ ಅರೋರಾ ಹೇಳಿಕೆ ಹೊರಬಿದ್ದಿದೆ.

ಕಳೆದ ನವೆಂಬರ್ ನಲ್ಲಿ ಪ್ರಧಾನಿ ಮೋದಿಯವರು, ಚುನಾವಣೆಗಳು ಕೆಲವು ತಿಂಗಳ ನಂತರ ದೇಶದ ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುವುದರಿಂದ ಭಾರತದಲ್ಲಿ ಈ ವ್ಯವಸ್ಥೆ ಬಹಳ ಮುಖ್ಯ ಎಂದು ಹೇಳಿದ್ದರು. ಇದೇ ವೇಳೆ, ಪ್ರಧಾನಿ ಮೋದಿ ಯವರು ತಿಂಗಳಿಗೊಮ್ಮೆ ಚುನಾವಣೆಗಳು ವಿವಿಧ ಸ್ಥಳಗಳಲ್ಲಿ ನಡೆಯುತ್ತವೆ. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯುಂಟಾಗುತ್ತವೆ ಮತ್ತು ಅದರ ಬಗ್ಗೆ ನಿಮಗೆಲ್ಲ ತಿಳಿದಿದೆ. ಆದ್ದರಿಂದ, ಒಂದು ದೇಶ, ಒಂದು ಚುನಾವಣೆ ಬಗ್ಗೆ ಆಳವಾದ ಅಧ್ಯಯನ ಮತ್ತು ಚರ್ಚೆ ಮಾಡುವುದು ಅಗತ್ಯ’ ಎಂದು ಹೇಳಿದ್ದರು.

‘ಒಂದು ರಾಷ್ಟ್ರ, ಒಂದು ಚುನಾವಣೆ’ ಪದ್ಧತಿಗೆ ಕಾಂಗ್ರೆಸ್ ಪಕ್ಷ ವೂ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತ ಪಡಿಸಿರಲಿಲ್ಲ, ಅಪ್ರಾಯೋಗಿಕ ವಾದವೆಂದು ಬಣ್ಣಿಸಿದವು.

2015ರಲ್ಲಿ ಇ.ಎಂ.ಸುದರ್ಶನ ನಾಚಿಯಪ್ಪನ್ ನೇತೃತ್ವದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸ್ಥಾಯಿ ಸಮಿತಿ ಈ ವ್ಯವಸ್ಥೆಯನ್ನು ಶಿಫಾರಸು ಮಾಡಿತ್ತು. 2018ರಲ್ಲಿ ಕಾನೂನು ಆಯೋಗ ವು ತನ್ನ ಕರಡು ವರದಿಯಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ ಚುನಾವಣೆಗಳನ್ನು ಒಟ್ಟಿಗೆ ನಡೆಸಬೇಕು ಎಂದು ಅನುಮೋದಿಸಿತ್ತು.