Sunday, 15th December 2024

ಅಕ್ಟೋಬರ್, ನವೆಂಬರ್’ನಲ್ಲಿ ಒಂದು ದಿನ ತಿರುಪತಿ ದೇವಾಲಯ ದರ್ಶನ ಸ್ಥಗಿತ

ಮರಾವತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಯೋಜನೆ ಮಾಡುತ್ತಿರುವ ಭಕ್ತರಿಗೆ ಎರಡು ದಿನಗಳ ಕಾಲ ತಿರುಪತಿಯಲ್ಲಿ ದರ್ಶನ ಭಾಗ್ಯ ಬಂದ್ ಮಾಡಲಾಗಿದೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಒಂದು ದಿನ ತಿರುಪತಿ ದೇವಾಲಯಲ್ಲಿ ದರ್ಶನ ಸ್ಥಗಿತಗೊಳಿಸ ಲಾಗಿದೆ. ಅ.25 ಮತ್ತು ನವೆಂಬರ್ 8ರಂದು ತಿರುಪತಿ ತಿರುಮಲ ದೇವಾಲಯ ಬಾಗಿಲು ಮುಚ್ಚಿರಲಿದೆ. ಸುಮಾರು 12ಗಂಟೆಗಳಿಗೂ ಅಧಿಕ ಕಾಲ ದೇವಾಲಯದ ಬಾಗಿಲು ಮುಚ್ಚಲಾಗಿರುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ.

ದೇವಾಲಯದ ಪ್ರಸಾದ ನಿಲಯದಲ್ಲಿ ಎರಡು ದಿನಗಳ ಕಾಲವೂ ಪ್ರಸಾದವನ್ನು ಸಹ ನೀಡಲಾಗುವುದಿಲ್ಲ ಎಂದು ಟಿಟಿಡಿ ಹೇಳಿದೆ.

ಸಾಮಾನ್ಯ, ವಿಐಪಿ, ಶ್ರೀವಾಣಿ, ವಿಶೇಷ ದರ್ಶನವನ್ನು ರದ್ದುಗೊಳಿಸಲಾಗಿದೆ. ಶುದ್ಧಿ, ಪುಣ್ಯಾಹ ಬಳಿಕ ಮತ್ತೆ ದರ್ಶನ, ಇತರ ಸೇವೆ ಆರಂಭಿಸಲಾಗುತ್ತದೆ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೋಬರ್ 25ರಂದು ಸೂರ್ಯ ಗ್ರಹಣವಿದೆ. ಅಂದು ಸಂಜೆ 5.11 ರಿಂದ 6.27ರ ತನಕ ಗ್ರಹಣಕಾಲವಾಗಿದೆ. ನವೆಂಬರ್ 8ರಂದು ಸೂರ್ಯ ಗ್ರಹಣವಿದೆ. ಅಂದು ಮಧ್ಯಾಹ್ನ 2.39ರಿಂದ 6.19ರ ತನಕ ಗ್ರಹಣಕಾಲವಾಗಿದೆ.

ಗ್ರಹಣ ಕಾಲದಲ್ಲಿ ದೇಶದಲ್ಲಿ ಎಲ್ಲಾ ದೇವಾಲಯಗಳನ್ನು ಮುಚ್ಚಲಾಗುತ್ತದೆ. ಬಳಿಕ ಶುದ್ದೀಕರಣ ನಡೆಸಿ ಪುನಃ ದರ್ಶನಕ್ಕೆ ಅವಕಾಶ ಮಾಡಿಕೊಡ ಲಾಗುತ್ತದೆ.