ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಸಚಿವ ಅನಿಲ್ ದೇಶಮುಖ್ ಅವರಿಗೆ ಬುಧವಾರ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
71 ವರ್ಷದ ಎನ್ ಸಿಪಿ ಮುಖಂಡ ಅನಿಲ್ ಅವರಿಗೆ ಸುಪ್ರೀಂಕೋರ್ಟ್ ಮದ್ಯಂತರ ಜಾಮೀನು ನಿರಾಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಆ.18 ರಂದು ದಕ್ಷಿಣ ಮುಂಬೈನ ಇಡಿ ಕಚೇರಿ ಯಲ್ಲಿ ಪ್ರಕರಣದ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ದೇಶ್ ಮುಖ್ ಅವರಿಗೆ ಸೂಚಿಸಲಾಗಿದೆ. ಐದನೇ ಬಾರಿಗೆ ನೋಟಿಸ್ ನೀಡಲಾಗಿತ್ತು.
ಪ್ರಕರಣದಲ್ಲಿ ಮತ್ತಷ್ಟು ಹೇಳಿಕೆಯನ್ನ ದಾಖಲಿಸಲು ಸಂಸ್ಥೆ ಬಯಸಿದ್ದರಿಂದ ಮನಿ ಲಾಂಡರಿಂಗ್ ತಡೆ ಕಾಯ್ದೆಯ ನಿಯಮಗಳ ಅಡಿಯಲ್ಲಿ ಇದನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಡಿಗೆ ಹಾಜರಾಗದ ಅನಿಲ್ ದೇಶಮುಖ್ ಅವರ ಪತ್ನಿ ಮತ್ತು ಪುತ್ರನಿಗೂ ಇಡಿ ಸಮನ್ಸ್ ನೀಡಿತ್ತು.