ಅಡುಗೆ ಅನಿಲ ಬೆಲೆಯನ್ನು ಕೂಡ ಇಳಿಸಲಾಗಿದೆ. ರಸಗೊಬ್ಬರಕ್ಕೆ ನೀಡಲಾ ಗುವ ಸಬ್ಸಿಡಿ ಮೊತ್ತ ಹೆಚ್ಚಿಸಲಾಗಿದೆ. ಇದೀಗ ಅಡುಗೆ ಎಣ್ಣೆಗಳ ಬೆಲೆಯೂ ಇಳಿಕೆಯಾಗುತ್ತಿದೆ.
ಇಂಡೋನೇಷ್ಯಾ ಸರ್ಕಾರವು ಎಣ್ಣೆ ರಫ್ತು ನಿಷೇಧ ಹಿಂಪಡೆದ ಪರಿಣಾಮ ತಾಳೆ ಎಣ್ಣೆ, ಸಾಸಿವೆ ಎಣ್ಣೆ, ಸೋಯಾ ಎಣ್ಣೆ ಇತ್ಯಾದಿ ಅಡುಗೆ ಎಣ್ಣೆಗಳ ಬೆಲೆ ಗಣನೀಯವಾಗಿ ಇಳಿಕೆ ಆಗಲು ಪ್ರಮುಖ ಕಾರಣವಾಗಿದೆ. ಭಾರತ ಆಮದು ಮಾಡಿಕೊಳ್ಳುವ ಎಣ್ಣೆಗಳಲ್ಲಿ ಪಾಮ್ ಆಯಿಲ್ ಅಥವಾ ತಾಳೆ ಎಣ್ಣೆ ಪ್ರಮುಖವಾದುದು. ತಾಳೆ ಎಣ್ಣೆ ಆಮದು ಇಂಡೋನೇಷ್ಯಾದಿಂದಲೇ ಬರುತ್ತದೆ. ಹೀಗಾಗಿ, ತಾಳೆ ಎಣ್ಣೆ ಬೆಲೆ ಇಳಿಕೆಯಾಗುತ್ತಿದೆ.
ಸೋಯಾ ಎಣ್ಣೆಯ ಬೆಲೆಯಲ್ಲೂ ಇಳಿಕೆಯಾಗಿದೆ. ಅತಿಹೆಚ್ಚು ಬಳಸಲಾಗುವ ಎಣ್ಣೆಗಳಲ್ಲಿ ಒಂದಾದ ಕಡಲೆಕಾಯಿ ಎಣ್ಣೆಯ ಬೆಲೆ ಒಂದು ಟಿನ್‌ಗೆ 25 ರೂ.ನಷ್ಟು ಕಡಿಮೆಯಾಗಿದೆ.
ತಾಳೆ ಎಣ್ಣೆ ಆಮದಿನಲ್ಲಿ ಇಂಡೋನೇಷ್ಯಾ ಮತ್ತು ಮಲೇಷ್ಯಾದ ಮೇಲೆ ಭಾರತ ಅವಲಂಬಿತವಾಗಿದೆ. ಇಂಡೋನೇಷ್ಯಾದಿಂದ ಒಂದು ವರ್ಷದಲ್ಲಿ ಭಾರತ 40 ಲಕ್ಷ ಟನ್‌ಗಳಷ್ಟು ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ.