Sunday, 15th December 2024

ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ ₹30 ರಷ್ಟು ಕಡಿತ

ನವದೆಹಲಿ: ಎಫ್‌ಎಂಸಿಜಿ ಸಂಸ್ಥೆ ಅದಾನಿ ವಿಲ್ಮಾರ್ ಸೋಮವಾರ ಜಾಗತಿಕ ಬೆಲೆಗಳ ಕುಸಿತದಿಂದಾಗಿ ಅಡುಗೆ ಎಣ್ಣೆಯ ಬೆಲೆಯನ್ನ ಪ್ರತಿ ಲೀಟರ್‌ಗೆ ₹30 ರಷ್ಟು ಕಡಿತಗೊಳಿಸಿದೆ ಎಂದು ಘೋಷಿಸಿದೆ.

ಹೊಸ ಬೆಲೆಗಳ ಸ್ಟಾಕ್ʼಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನ ತಲುಪಲಿವೆ.

ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿ ಸೋಯಾಬೀನ್ ತೈಲ ಬೆಲೆಯನ್ನು ಪ್ರತಿ ಲೀಟರ್ʼಗೆ ₹195 ರಿಂದ ₹ 165ಕ್ಕೆ ಇಳಿಸಿದೆ. ಸೂರ್ಯಕಾಂತಿ ಎಣ್ಣೆಯ ಬೆಲೆಯನ್ನು ಪ್ರತಿ ಲೀಟರ್ʼಗೆ ₹210 ರಿಂದ ₹199ಕ್ಕೆ ಅಗ್ಗವಾಗಿಸಲಾಗಿದೆ ಮತ್ತು ಸಾಸಿವೆ ಎಣ್ಣೆ ಎಂಆರ್‌ಪಿ ಅನ್ನು ಪ್ರತಿ ಲೀಟರ್ʼಗೆ ₹195 ರಿಂದ ₹190 ಕ್ಕೆ ಇಳಿಸಲಾಗಿದೆ.

ಫಾರ್ಚೂನ್ ರೈಸ್ ಹೊಟ್ಟು ಎಣ್ಣೆಯ ಬೆಲೆಯನ್ನ ಪ್ರತಿ ಲೀಟರ್ʼಗೆ ₹225 ರಿಂದ ₹210ಕ್ಕೆ ಕಡಿತ, ನೆಲಗಡಲೆ ಎಣ್ಣೆ ಬೆಲೆಯನ್ನ ಪ್ರತಿ ಲೀಟರ್ʼಗೆ ₹220 ರಿಂದ ₹210 ಕ್ಕೆ ಪರಿಷ್ಕರಿಸ ಲಾಗಿದೆ.

ರಾಗ ವನಸ್ಪತಿಯ ಬೆಲೆಯನ್ನ ಪ್ರತಿ ಲೀಟರ್ʼಗೆ ₹200 ರಿಂದ ₹185ಕ್ಕೆ ಇಳಿಸಲಾಗಿದೆ. ಆದ್ರೆ, ರಾಗ ಪಾಮೋಲಿನ್ ತೈಲ ಬೆಲೆಯನ್ನ ಪ್ರತಿ ಲೀಟರ್ʼಗೆ ₹170 ರಿಂದ ₹144 ಕ್ಕೆ ಇಳಿಸಲಾಗಿದೆ.

ಈ ಹಿಂದೆ, ಫೆಬ್ರವರಿ 7 ರಂದು, ಧಾರಾ ಬ್ರಾಂಡ್ ಅಡಿಯಲ್ಲಿ ಖಾದ್ಯ ತೈಲಗಳನ್ನು ಮಾರಾಟ ಮಾಡುವ ಮದರ್ ಡೈರಿ, ಸೋಯಾ ಬೀನ್ ಮತ್ತು ಅಕ್ಕಿ ಹೊಟ್ಟು ಎಣ್ಣೆಗಳ ಬೆಲೆಯನ್ನ ಪ್ರತಿ ಲೀಟರ್‌ಗೆ ಕನಿಷ್ಠ ₹14ರಷ್ಟು ಕಡಿಮೆ ಮಾಡಿದೆ.