ಚಂಡೀಗಢ : ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಬುಧವಾರ ಪಂಜಾಬ್‌ನ ವಿವಿಧ ಸ್ಥಳಗಳಲ್ಲಿ ಶೋಧ ನಡಿಸಿ 3.5 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕುಖ್ಯಾತ ಭೋಲಾ ಡ್ರಗ್ಸ್, ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದ್ದ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆ ರೋಪರ್ ಜಿಲ್ಲೆಯ 13 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಗಳಲ್ಲಿ ನಾಸಿಬ್‌ಚಂದ್ ಮತ್ತು ಶ್ರೀರಾಮ್ ಕ್ರಷರ್‌ಗಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣವು ಪಂಜಾಬ್‌ನಲ್ಲಿ 2013-14ರ ಅವಧಿಯಲ್ಲಿ ಪತ್ತೆಯಾದ ಬಹುಕೋಟಿ ಸಿಂಥೆಟಿಕ್ ಮಾದಕ ದ್ರವ್ಯ ದಂಧೆಗೆ ಸಂಬಂಧಿಸಿದೆ. ಪಂಜಾಬ್ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಪ್ರಕರಣವನ್ನು ದಾಖಲಿಸಿದೆ.
ಆಪಾದಿತ ಕಿಂಗ್‌ಪಿನ್ ಜಗದೀಶ್ ಸಿಂಗ್ ಅಲಿಯಾಸ್ ಭೋಲಾನನ್ನು ಗುರುತಿಸಲು ಈ ಪ್ರಕರಣವನ್ನು ಸಾಮಾನ್ಯವಾಗಿ ಭೋಲಾ ಡ್ರಗ್ ಕೇಸ್ ಎಂದು ಕರೆಯಲಾಗುತ್ತದೆ. ಭೋಲಾ ಅವರನ್ನು ಜನವರಿ 2014ರಲ್ಲಿ ಇಡಿ ಬಂಧಿಸಿತ್ತು.