ತಾನೇ ಶಿವಸೇನೆಯ ನಾಯಕ ಹಾಗೂ ಠಾಕ್ರೆ ಪಾಳಯದಲ್ಲಿ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ತಮ್ಮನ್ನು ಎಂದಿಗೂ ಪಕ್ಷ ಪ್ರಮುಖ್ (ಪಕ್ಷದ ಮುಖ್ಯಸ್ಥರು) ಎಂದು ಕರೆದು ಕೊಂಡಿಲ್ಲ ಎಂದು ಶಿಂಧೆ ವಾದಿಸಿದ್ದಾರೆ. ಉದ್ಧವ್ ಠಾಕ್ರೆ ತಾಂತ್ರಿಕವಾಗಿ ಇನ್ನೂ ಪಕ್ಷದ ಮುಖ್ಯಸ್ಥರಾಗಿದ್ದಾರೆ.
ಶಿಂಧೆ ಅವರು ತಾನೇ ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ರಾಜಕೀಯ ಉತ್ತರಾಧಿ ಕಾರಿ ಎಂದು ಸೂಕ್ಷ್ಮ ಸಂದೇಶವನ್ನು ಕಳುಹಿಸಿದ್ದರು. ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿದ್ದರು.
ಶರದ್ ಪವಾರ್ ಅವರ ನ್ಯಾಷನ ಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಹಾಗೂ ಕಾಂಗ್ರೆಸ್‌ನೊಂದಿಗೆ ಒಕ್ಕೂಟವನ್ನು ರಚಿಸುವ ಮೂಲಕ ಠಾಕ್ರೆ ಅವರು ತಮ್ಮ ತಂದೆ ಬಾಳ್ ಠಾಕ್ರೆಯವರ ಹಿಂದುತ್ವ ಸಿದ್ಧಾಂತವನ್ನು ದುರ್ಬಲಗೊಳಿಸಿದ್ದಾರೆ ಎಂದು ವಾದಿಸಿತ್ತು.