Saturday, 14th December 2024

ವಿಶ್ವಾಸಮತ ಯಾಚನೆಯಲ್ಲಿ ಏಕನಾಥ್‌ ಶಿಂಧೆಗೆ ಗೆಲುವು

ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆ ಏರಿರುವ ಏಕನಾಥ್‌ ಶಿಂಧೆ. ಇವರು ಸರ್ಕಾರ ರಚನೆಗೆ ನಿರ್ಣಾಯಕವಾಗಿದ್ದ ವಿಶ್ವಾಸಮತ ಯಾಚನೆಯಲ್ಲಿ ಯಶಸ್ಸು ಪಡೆದುಕೊಂಡಿದ್ದಾರೆ.

ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಅವರು ಸ್ಪೀಕರ್​ ಆಗಿ ನೇಮಕಗೊಂಡಿದ್ದರು. 288 ಸದಸ್ಯ ಬಲದ ವಿಧಾನಸಭೆಯಲ್ಲಿ 164 ಮತಗಳಿಂದ ನಾರ್ವೇಕರ್​ ಆಯ್ಕೆಯಾಗಿದ್ದರು. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಿವಸೇನಾ ಶಾಸಕ ಮತ್ತು ಉದ್ಧವ್ ಠಾಕ್ರೆ ಆಪ್ತ ರಾಜನ್ ಸಾಲ್ವಿ ಕಣದಲ್ಲಿದ್ದರು. ಇವರಿಗೆ 106 ಮತಗಳು ಬಂದಿದ್ದವು.

ನೂತನ ಸರ್ಕಾರದ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಸೋಮವಾರ ನಡೆದಿದ್ದು, 164 ಮಂದಿಯ ಬಹುಮತವನ್ನು ಶಿಂಧೆ ಸರ್ಕಾರ ಪಡೆದುಕೊಂಡಿದೆ. ಈ ನಡುವೆಯೇ 16 ಶಾಸಕರ ಅನರ್ಹತೆಯ ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದು, ಅವರನ್ನು ಅಮಾನತು ಗೊಳಿಸಲು ಶಿವಸೇನಾ ಮುಖ್ಯ ವಿಪ್ ಸುನಿಲ್ ಪ್ರಭು ಮಾಡಿರುವ ಮನವಿಯ ಅರ್ಜಿಯನ್ನು ಸುಪ್ರೀಂಕೋರ್ಟ್ ಜು.11ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ.

ಅದೇ ದಿನ ಅನರ್ಹತೆಯನ್ನು ಪ್ರಶ್ನಿಸಿ ಶಿಂಧೆ ಬಣ ಸಲ್ಲಿಸಿರುವ ಅರ್ಜಿಗಳನ್ನು ಕೂಡ ನ್ಯಾಯಾಲಯ ವಿಚಾರಣೆ ನಡೆಸಲಿದೆ.