ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (devendra fadnavis) ಅವರ ನೇತೃತ್ವದಲ್ಲಿ ಭಾನುವಾರ ಸಚಿವ ಸಂಪುಟ ವಿಸ್ತರಣೆ (Cabinet Expectation) ನಡೆದಿದೆ. ಬಿಜೆಪಿಯ 19 ಮತ್ತು ಏಕನಾಥ ಶಿಂಧೆ (Eknath Shinde) ನೇತೃತ್ವದ ಶಿವಸೇನೆ ಹಾಗೂ ಪವಾರ್ ಎನ್ಸಿಪಿದ ತಲಾ 10 ಶಾಸಕರು ಫಡ್ನವೀಸ್ ಸಂಪುಟಕ್ಕೆ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ಆದರೆ ಮಹಾಯುತಿ ಮೈತ್ರಿಯಲ್ಲಿ ಬಿರುಕು ಮೂಡಿದ್ದು, ಶಿವಸೇನೆ (Shiv Sena) ನಾಯಕ ಸಚಿವ ಸ್ಥಾನ ಸಿಗಿದ್ದಕ್ಕೆ ಅಸಮಾಧಾನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ ಭಂಡಾರಾ ಶಾಸಕ ನರೇಂದ್ರ ಭೋಂಡೇಕರ್ ಅವರು ಶಿವಸೇನಾ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಮಗಠಾಣೆಯ ಶಿವಸೇನಾ ಶಾಸಕ ಪ್ರಕಾಶ್ ಸುರ್ವೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನೆಯು ತನ್ನ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಂದ ಶೀಘ್ರದಲ್ಲೇ ಅಫಿಡವಿಟ್ಗಳನ್ನು ತೆಗೆದುಕೊಳ್ಳಲಿದೆ ಎಂಬ ಮಾಹಿತಿ ದೊರೆತಿದೆ. ಎರಡುವರೆ ವರ್ಷಕ್ಕೂ ಮೊದಲೇ ಪಕ್ಷ ತೊರೆಯುವ ಶಾಸಕರಿಂದ ಅಫಿಡವಿಟ್ಗಳನ್ನು ಪಡೆಯುವುದಾಗಿ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಶಂಭುರಾಜ್ ದೇಸಾಯಿ ತಮ್ಮ ಪಕ್ಷವು ‘ಕಾರ್ಯನಿರ್ವಹಣೆ ಅಥವಾ ನಾಶ’ ನೀತಿಯನ್ನು ಅಳವಡಿಸಿಕೊಂಡಿದೆ ಮತ್ತು ಯಾರು ಕಾರ್ಯನಿರ್ವಹಿಸಿದರೂ ಉಳಿಯುತ್ತಾರೆ ಎಂದು ಘೋಷಿಸಿದ್ದಾರೆ. ಏಕನಾಥ ಶಿಂಧೆ ಅವರ ಆತ್ಮೀಯರೊಬ್ಬರು ಮಾತನಾಡಿ ಶಿವಸೇನೆ ಶಾಸಕರು ಏಕನಾಥ್ ಶಿಂಧೆ ಅವರಿಗಾಗಲೀ ಇಲ್ಲವೇ ಪಕ್ಷದ ಸಿದ್ಧಾಂತಕ್ಕಾಗಲಿ ನಿಷ್ಠೆಯನ್ನು ಹೊಂದಿಲ್ಲ. ಅವರಿಗೆ ಬೇಕಾಗಿರುವುದು ಅಧಿಕಾರ ಅಷ್ಟೇ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಸಿಎಂ ದೇವೇಂದ್ರ ಫಡ್ನವೀಸ್ ಅವರ ಮಾತಿನಂತೆ ಕೈಬಿಡಲಾದ ಶಿವಸೇನೆಯ ಮೂವರು ಶಾಸಕರಾದ ದೀಪಕ್ ಕೇಸರ್ಕರ್, ಅಬ್ದುಲ್ ಸತ್ತಾರ್ ಮತ್ತು ತಾನಾಜಿ ಸಾವಂತ್ ಅವರು ಅತೃಪ್ತರಾಗಿದ್ದಾರೆ ಎಂದು ಹೇಳಲಾಗುತ್ತದೆ. ಕುತೂಹಲಕಾರಿ ಸಂಗತಿಯೆಂದರೆ, ಶಿವ ಸೇನೆಯ ಮತ್ತೊಬ್ಬ ಸಚಿವ ಸಂಜಯ್ ರಾಥೋಡ್ ಅವರ ವಿರುದ್ಧ ಹಲವು ದೂರುಗಳಿದ್ದರೂ ಸಹ ಅವರನ್ನು ಉಳಿಸಿಕೊಂಡಿದ್ದಾರೆ. ದೇವೇಂದ್ರ ಫಡ್ನವೀಸ್ ಅವರೊಂದಿಗಿನ ಸ್ನೇಹವೇ ಇದಕ್ಕೆ ಕಾರಣ ಎಂದು ಮೂಲಗಳು ಸೂಚಿಸಿವೆ.
ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಆಕಾಂಕ್ಷಿಯಾಗಿದ್ದ ಭೋಂಡೇಕರ್ ಅವರು ಮಂತ್ರಿಗಳ ಆಯ್ಕೆಯ ಬಗ್ಗೆ ಮಹಾಯುತಿಯ ವಿರುದ್ಧ ವಾಗ್ದಾಳಿ ನಡೆಸಿದರು, “ಕಳಂಕಿತ ಶಾಸಕರು” ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇಂದು ಪ್ರಮಾಣ ವಚನ ಸ್ವೀಕರಿಸಿದ ಅನೇಕರು ಪಕ್ಷಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಅನೇಕ ಕಳಂಕಿತರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ ಆದರೆ ಅವರಿಗೂ ಸಚಿವ ಸ್ಥಾನ ಸಿಕ್ಕಿದೆ. ನಮ್ಮ ನಿರೀಕ್ಷೆಗಳು ಈಡೇರಿಲ್ಲ ಮತ್ತು ಇದು ನಮಗೆಲ್ಲ ದುಃಖವನ್ನುಂಟು ಮಾಡುತ್ತದೆ. ಕಾರ್ಮಿಕರ ಭಾವನೆಗಳಿಗೂ ಧಕ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Devendra Fadnavis: ಅಭಿವೃದ್ಧಿಯ ರಾಜಕೀಯವೇ ನಮ್ಮ ಗುರಿ: ʼಮಹಾʼ ಸಿಎಂ ದೇವೇಂದ್ರ ಫಡ್ನವಿಸ್