ಪ್ರಸ್ತುತ ಮಿತಿಯು 20 ಸಾವಿರ ರೂ.ಗಳಿಗೆ ನಿಗದಿಯಾಗಿದ್ದ ಅದನ್ನು 2 ಸಾವಿರ ರೂ. ಮಿತಿಗೆ ಇಳಿಸಲಾಗಿದೆ. ಅಲ್ಲದೇ ಪಕ್ಷಕ್ಕೆ ನಗದು ರೂಪದ ದೇಣಿಗೆಯನ್ನು 20 ಕೋಟಿ ರೂ. ಅಥವಾ ಪಕ್ಷದಿಂದ ಪಡೆದ ಒಟ್ಟು ದೇಣಿಗೆಯಲ್ಲಿ ಶೇ.20ಗೆ ಸೀಮಿತಗೊಳಿಸಲು ಚುನಾವಣಾ ಆಯೋಗ ಪ್ರಯತ್ನಿಸುತ್ತಿದೆ.
ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದು ರಾಜಕೀಯ ನಿಧಿಸಂಗ್ರಹದ ಚಿತ್ರಣವನ್ನು ಹೆಚ್ಚು ಪಾರದರ್ಶಕ ಹಾಗೂ ಸ್ವಚ್ಛವಾಗಿರಿಸಲು ಜನರ ಪ್ರಾತಿನಿಧ್ಯ ಕಾಯಿದೆಗೆ ತಿದ್ದುಪಡಿ ತರಲು ಪ್ರಸ್ತಾಪಿಸಿದ್ದಾರೆ.
ಮೊದಲ ಹೆಜ್ಜೆ ಮಾನ್ಯತೆ ಪಡೆಯದ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿತ್ತು. ಈಗ ಆಯೋಗವು ಮಾನ್ಯತೆ ಪಡೆದ ಪಕ್ಷಗಳು ಕೆಲಸ ಮಾಡುವ ವಿಧಾನವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ ಮತ್ತು ಕಪ್ಪುಹಣ ಮತ್ತು ತೆರಿಗೆ ವಂಚನೆಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದೆ ” ಎಂದು ಮೂಲಗಳು ವರದಿ ಮಾಡಿವೆ.
ಚುನಾವಣಾ ಉದ್ದೇಶಕ್ಕಾಗಿ ಪ್ರತಿ ಅಭ್ಯರ್ಥಿಯು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಚುನಾವಣಾ ಸಂಸ್ಥೆ ಶಿಫಾರಸು ಮಾಡಿದೆ.