ಚಂಡೀಗಢ: ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ(Counting) ಭಾರೀ ಬಿರುಸಿನಿಂದ ಸಾಗಿದ್ದು,ಹರಿಯಾಣ ಫಲಿತಾಂಶ(Election result 2024)ದ ಚಿತ್ರಣವೇ ಕೆಲವೇ ಕೆಲವು ಕ್ಷಣದಲ್ಲಿ ಬದಲಾಗಿದೆ. ಭಾರೀ ಮುನ್ನಡೆ ಕಾಯ್ಡುಕೊಂಡು ಅರ್ಧ ಶತಕ ದಾಟಿ ಗೆಲುವಿನತ್ತ ದಾಪುಗಾಲಿಡುತ್ತಿದ್ದ ಕಾಂಗ್ರೆಸ್ ಏಕಾಏಕಿ ಹಿನ್ನಡೆ ಅನುಭವಿಸಿದೆ. ಬಿಜೆಪಿ ಸ್ಥಾನಗಳು ನಿಧಾನವಾಗಿ ಏರಿಕೆ ಕಂಡಿದ್ದು, ಹಾವು ಏಣಿ ಆಟ ಮುಂದುವರೆದಿದೆ.
#HaryanaElections | BJP leading on 38, Congress on 36, INLD and BSP on 1 each as per the latest EC data. pic.twitter.com/A28bfPPOvJ
— ANI (@ANI) October 8, 2024
ಸದ್ಯ ಬಿಜೆಪಿ 46, ಕಾಂಗ್ರೆಸ್ 38ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಹ್ಯಾಟ್ರಿಕ್ ಗೆಲುವಿನ ಕನಸು ಹೊತ್ತಿರುವ ಬಿಜೆಪಿಗೆ ಕೊಂಚ ನಿರಾಳ ಎಂದೆನಿಸಿದೆ. ಹರಿಯಾಣದಲ್ಲಿ ಬಹುಮತಕ್ಕೆ 46ಸ್ಥಾನಗಳು ಬೇಕಾಗಿದ್ದು, ಈಗಾಗಲೇ ಬಿಜೆಪಿ ಅಷ್ಟೂ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅ ಮೂಲಕ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವ ಕಾಂಗ್ರೆಸ್ ಕನಸು ಭಗ್ನವಾಗುವ ಆತಂಕ ಇದೆ. ಇನ್ನು ಜಮ್ಮು-ಕಾಶ್ಮೀರದಲ್ಲಿ ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚನೆ ಬಹುತೇಕ ಖಚಿತ ಆಗಿದೆ
#WATCH | Congress candidate from Julana, Vinesh Phogat leaves from a counting centre in Jind, Haryana.
— ANI (@ANI) October 8, 2024
As per official EC trends, she is leading from Julana. #HaryanaElection pic.twitter.com/cagXmHUqUp
ಈ ಸುದ್ದಿಯನ್ನೂ ಓದಿ: Assembly Election result: ಬಹಳ ಕುತೂಹಲ ಕೆರಳಿಸಿರುವ ಹರಿಯಾಣ, ಕಾಶ್ಮೀರ ಎಲೆಕ್ಷನ್ ರಿಸಲ್ಟ್ ಇಂದು ಪ್ರಕಟ
#WATCH | #HaryanaElections | Delhi: AAP Haryana president Sushil Gupta says, "These are just initial trends…AAP will also get a good vote share here. Every worker of AAP worked hard. We didn't have funds. Our leaders were jailed but despite such tough situations, we contested… pic.twitter.com/fh9PCPbdMc
— ANI (@ANI) October 8, 2024