Thursday, 12th December 2024

Election result 2024: ಏಕಾಏಕಿ ಬದಲಾದ ಹರಿಯಾಣ ಫಲಿತಾಂಶ ಚಿತ್ರಣ; ಕಾಂಗ್ರೆಸ್‌ ಹಿಂದಿಕ್ಕಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ

Election result 2024

ಚಂಡೀಗಢ: ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ(Counting) ಭಾರೀ ಬಿರುಸಿನಿಂದ ಸಾಗಿದ್ದು,ಹರಿಯಾಣ ಫಲಿತಾಂಶ(Election result 2024)ದ ಚಿತ್ರಣವೇ ಕೆಲವೇ ಕೆಲವು ಕ್ಷಣದಲ್ಲಿ ಬದಲಾಗಿದೆ. ಭಾರೀ ಮುನ್ನಡೆ ಕಾಯ್ಡುಕೊಂಡು ಅರ್ಧ ಶತಕ ದಾಟಿ ಗೆಲುವಿನತ್ತ ದಾಪುಗಾಲಿಡುತ್ತಿದ್ದ ಕಾಂಗ್ರೆಸ್‌ ಏಕಾಏಕಿ ಹಿನ್ನಡೆ ಅನುಭವಿಸಿದೆ. ಬಿಜೆಪಿ ಸ್ಥಾನಗಳು ನಿಧಾನವಾಗಿ ಏರಿಕೆ ಕಂಡಿದ್ದು, ಹಾವು ಏಣಿ ಆಟ ಮುಂದುವರೆದಿದೆ.

ಸದ್ಯ ಬಿಜೆಪಿ 46, ಕಾಂಗ್ರೆಸ್‌ 38ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಹ್ಯಾಟ್ರಿಕ್‌ ಗೆಲುವಿನ ಕನಸು ಹೊತ್ತಿರುವ ಬಿಜೆಪಿಗೆ ಕೊಂಚ ನಿರಾಳ ಎಂದೆನಿಸಿದೆ. ಹರಿಯಾಣದಲ್ಲಿ ಬಹುಮತಕ್ಕೆ 46ಸ್ಥಾನಗಳು ಬೇಕಾಗಿದ್ದು, ಈಗಾಗಲೇ ಬಿಜೆಪಿ ಅಷ್ಟೂ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅ ಮೂಲಕ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವ ಕಾಂಗ್ರೆಸ್‌ ಕನಸು ಭಗ್ನವಾಗುವ ಆತಂಕ ಇದೆ. ಇನ್ನು ಜಮ್ಮು-ಕಾಶ್ಮೀರದಲ್ಲಿ ಎನ್‌ಸಿ-ಕಾಂಗ್ರೆಸ್‌ ಮೈತ್ರಿಕೂಟ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚನೆ ಬಹುತೇಕ ಖಚಿತ ಆಗಿದೆ

ಈ ಸುದ್ದಿಯನ್ನೂ ಓದಿ: Assembly Election result: ಬಹಳ ಕುತೂಹಲ ಕೆರಳಿಸಿರುವ ಹರಿಯಾಣ, ಕಾಶ್ಮೀರ ಎಲೆಕ್ಷನ್‌ ರಿಸಲ್ಟ್‌ ಇಂದು ಪ್ರಕಟ