Sunday, 15th December 2024

ಸರಿಯಾದ ಮಾತು, ಸಭ್ಯತೆ ಕಾಪಾಡಿಕೊಳ್ಳಿ: ಚುನಾವಣಾ ಭಾಷಣಗಳ ಬಗ್ಗೆ ಆಯೋಗ ತರಾಟೆ

ವದೆಹಲಿ: ಲೋಕಸಭೆ ಚುನಾವಣೆಯ ಐದು ಹಂತಗಳ ಮತದಾನ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಸ್ಟಾರ್ ಪ್ರಚಾರಕರ ಚುನಾವಣಾ ಭಾಷಣಗಳ ಬಗ್ಗೆ ಚುನಾವಣಾ ಆಯೋಗವು ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತ್ಯೇಕವಾಗಿ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ. ಸರಿಯಾದ ಮಾತು, ಸಭ್ಯತೆಯನ್ನು ಕಾಪಾಡಿಕೊಳ್ಳಿ. ದೇಶದ ಸಾಮಾಜಿಕ-ಸಾಂಸ್ಕೃತಿಕ ಪರಿಸರವು ಚುನಾವಣೆಗೆ ಬಲಿಯಾಗಲು ಸಾಧ್ಯವಿಲ್ಲ ಎಂದು ಚುನಾವಣಾ ಸಂಸ್ಥೆ ಎಚ್ಚರಿಸಿದೆ.

ಚುನಾವಣಾ ಆಯೋಗವು ನೊಟೀಸ್ ಜಾರಿ ಮಾಡಿದ್ದು, ಆರೋಪಗಳ ಬಗ್ಗೆ ಪ್ರತಿಕ್ರಿಯೆ ಕೇಳಿದೆ. ನಡ್ಡಾ ಅವರಿಗೆ ಬರೆದ ಪತ್ರದಲ್ಲಿ, ಚುನಾವಣಾ ಸಂಸ್ಥೆಯು ಬಿಜೆಪಿಯು ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವಾಗಿ ಪ್ರಚಾರದ ವಿಧಾನಗಳನ್ನು ಉನ್ನತ ಮಟ್ಟದಲ್ಲಿ ಪಾಲಿಸಬೇಕು ಎಂದು ನಿರೀಕ್ಷಿಸುತ್ತದೆ ಎಂದು ಹೇಳಿದೆ.ಮಾದರಿ ನೀತಿ ಸಂಹಿತೆ ಅಡಿಯಲ್ಲಿ ನಿಷೇಧಿತ ಯಾವುದೇ ಹೇಳಿಕೆ ನೀಡದಂತೆ ಎಲ್ಲಾ ಸ್ಟಾರ್ ಪ್ರಚಾರಕರಿಗೆ ಸೂಚನೆ ನೀಡುವಂತೆ ಆಯೋಗವು ಬಿಜೆಪಿಗೆ ಸೂಚಿಸಿದೆ.

ಕಾಂಗ್ರೆಸ್​ನ ಸ್ಟಾರ್ ಪ್ರಚಾರಕರು ಮತ್ತು ಅಭ್ಯರ್ಥಿಗಳು ಸಂವಿಧಾನವನ್ನು ರದ್ದುಗೊಳಿಸಬಹುದು ಅಥವಾ ಬದಲಿಸಬಹುದು ಎಂಬ ತಪ್ಪು ಅಭಿಪ್ರಾಯವನ್ನು ನೀಡುವ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವಂತೆ ಆಯೋಗ ಕಾಂಗ್ರೆಸ್‌ಗೆ ಕೇಳಿದೆ.