ಭಾರತದ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಬೈಕ್, ಕಾರು ಹೆಚ್ಚಿನವರು ಓಡಿಸುತ್ತಿದ್ದಾರೆ. ಇದೀಗ ಬೈಸಿಕಲ್ ಸರದಿ. ಐಷಾರಾಮಿ ಸೈಕ್ಲಿಂಗ್ ಅನುಭವ ಕೊಡುವ ಎಲೆಕ್ಟ್ರಿಕ್ ಕೊಲ್ನಾಗೊ ಸಿ64 (Colnago C64) ಸೈಕಲ್ (Electric Cycle) ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಇದರ ಬೆಲೆ 7.49 ಲಕ್ಷ ರೂ. ನಿಂದ ಪ್ರಾರಂಭವಾಗಲಿದೆ.
ಬೆರಗುಗೊಳಿಸುವ ವಿನ್ಯಾಸ ಮತ್ತು ಅತ್ಯುನ್ನತ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ ಭಾರತದ ಮಾರುಕಟ್ಟೆ ಪ್ರವೇಶಿಸಿರುವ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಬೈಸಿಕಲ್ (India’s most expensive electric bicycle) ಇದಾಗಿದೆ. ಇದು ಕೊಂಚ ದುಬಾರಿಯಾಗಿದ್ದು, ಅಸಾಧಾರಣ ಬೆಲೆಯಿಂದಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಸೀಮಿತವಾಗಿ ಲಭ್ಯವಿರುವ ಈ ಬೈಸಿಕಲ್ ನ ಅತ್ಯುತ್ತಮ ಗುಣಮಟ್ಟ ಈಗ ಚರ್ಚೆಯ ವಿಷಯವಾಗಿದೆ.
ವೈಶಿಷ್ಟ್ಯ ಮತ್ತು ಶೈಲಿಯಿಂದಾಗಿ ಕೊಲ್ನಾಗೊ ಸಿ64 ಕೇವಲ ಬೈಸಿಕಲ್ ಆಗಿಲ್ಲ. ಇದು ಜನರು ಹೊಂದಬಹುದಾದ ಐಷಾರಾಮಿ ವಸ್ತುವಾಗಿದೆ.
ಭಾರತದಲ್ಲಿ ಈಗ ಶಕ್ತಿಶಾಲಿಯಾದ ಸೈಕಲ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕೊಲ್ನಾಗೊ ಸಿ64 ಒಂದು ಅತ್ಯುತ್ತಮ ಕಾರ್ಯಕ್ಷಮತೆಯ ಕಾರ್ಬನ್ ಫೈಬರ್ ರೋಡ್ ಬೈಕ್ ಆಗಿದೆ. ಇದು ಈಗ ಎಲೆಕ್ಟ್ರಿಕ್ ರೂಪಾಂತರದಲ್ಲೂ ಲಭ್ಯವಿದೆ.
ಇದು ಕಾರ್ಬನ್ ಮೊನೊಕೊಕ್ ಫ್ರೇಮ್ ಮತ್ತು ಕಾರ್ಬನ್ ಫೋರ್ಕ್ ಅನ್ನು ಬಳಸುತ್ತದೆ. ಈ ಬೈಕ್ ಅತ್ಯಂತ ಹಗುರ ಮತ್ತು ಹೆಚ್ಚು ಶಕ್ತಿಶಾಲಿಯಾಗಿದೆ. ಇದು ದೀರ್ಘಕಾಲದವರೆಗೆ ಸೈಕ್ಲಿಂಗ್ ಮಾಡುವಾಗಲೂ ಆರಾಮದಾಯಕ ಅನುಭವವನ್ನು ಕೊಡುತ್ತದೆ.
ಕೊಲ್ನಾಗೊ ಸಿ64 ಎಲೆಕ್ಟ್ರಿಕ್ ಬೈಸಿಕಲ್ ಶಿಮಾನೊ ಡುರಾ- ಏಸ್ ಡಿ2 12- ಸ್ಪೀಡ್ ಗ್ರೂಪ್ಸೆಟ್ ಅನ್ನು ಹೊಂದಿದೆ. ಇದು ಗೇರ್ ಶಿಫ್ಟಿಂಗ್ ಅನ್ನು ಒದಗಿಸುತ್ತದೆ. ಇದರಲ್ಲಿರುವ ಶಿಮಾನೋ ಡ್ಯೂರಾ -ಎಸಿಇ 9270 ಕ್ಯಾಲಿಪರ್ ಬ್ರೇಕ್ಗಳು ಮತ್ತು ಶಿಮಾನೋ ಎಂಟಿ 900 ಡಿಸ್ಕ್ ರೋಟರ್ಗಳು ಈ ಬೈಸಿಕಲ್ ಗೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಇದು ಅತ್ಯಂತ ಕಠಿಣ ಪರಿಸ್ಥಿತಿಯ ರಸ್ತೆಯಲ್ಲೂ ಹೆಚ್ಚು ಸುರಕ್ಷಿತವಾಗಿದೆ.
ಕೊಲ್ನಾಗೊ ಸಿ64 ಬೈಸಿಕಲ್ ಎಲೆಕ್ಟ್ರಿಕ್ ಮೋಟರ್ ಅನ್ನು ಸಹ ಹೊಂದಿದೆ. ಇದು ಸವಾರನಿಗೆ ಸವಾಲಿನ ಹಾದಿಯಲ್ಲಿ ಹೆಚ್ಚು ಬೆಂಬಲವಾಗಿ ಕೆಲಸ ಮಾಡುತ್ತದೆ.
ಲಾಂಗ್ ರೈಡ್ಗಳಿಗೆ ಅತ್ಯುತ್ತಮ ಆಯ್ಕೆಯಾಗಿರುವ ಈ ಬೈಸಿಕಲ್ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚುವರಿ ಬೆಂಬಲವನ್ನು ನೀಡುತ್ತದೆ. ಇದರೊಂದಿಗೆ ಡೆಡಾ ವಿನ್ಸಿ ಹ್ಯಾಂಡಲ್ಬಾರ್ಗಳು, ಫಿಜಿಕ್ ಸ್ಯಾಡಲ್ ಮತ್ತು ಕೊಲ್ನಾಗೊ ಸಿ64 ಕಾರ್ಬನ್ ಸೀಟ್ ಅನ್ನು ಒದಗಿಸಲಾಗಿದೆ.
8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್! ಕನಿಷ್ಠ ವೇತನದಲ್ಲಿ ಶೇ.186ರಷ್ಟು ಏರಿಕೆ ಸಾಧ್ಯತೆ
ಕೊಲ್ನಾಗೊ ಸಿ64 ಎಲೆಕ್ಟ್ರಿಕ್ ಬೈಸಿಕಲ್ ಭಾರತದಲ್ಲಿ 7,49,000 ರೂ. ಗೆ ಲಭ್ಯವಿದೆ. ಇದು ಭಾರತದಲ್ಲಿನ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಬೈಸಿಕಲ್ಗಳಲ್ಲಿ ಒಂದಾಗಿದೆ.