ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕಾಶ್ಮೀರ ಕಣಿವೆಯಲ್ಲಿ ಮೊದಲ ಎಲೆಕ್ಟ್ರಿಕ್ ರೈಲು ಮತ್ತು ಸಂಗಲ್ದನ್ ನಿಲ್ದಾಣ ಮತ್ತು ಬಾರಾಮುಲ್ಲಾ ನಿಲ್ದಾಣದ ನಡುವಿನ ರೈಲು ಸೇವೆಗೆ ಹಸಿರು ನಿಶಾನೆ ತೋರುತ್ತಿದ್ದಂತೆ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಶ್ಲಾಘಿಸಿದ್ದಾರೆ.
ನಮಗೆ ಅದರ ಅಗತ್ಯವಿತ್ತು. ಇದು ನಮ್ಮ ಪ್ರವಾಸೋದ್ಯಮ ಮತ್ತು ಜನರಿಗೆ ಮುಖ್ಯವಾಗಿದೆ. ಇದು ದೊಡ್ಡ ಹೆಜ್ಜೆಯಾಗಿದೆ. ಇದಕ್ಕಾಗಿ ನಾನು ರೈಲ್ವೆ ಸಚಿವಾಲಯ, ಪ್ರಧಾನಿ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಹೇಳಿದ್ದಾರೆ.
“ರೈಲು ನಮ್ಮನ್ನು ಸಂಪರ್ಕಿಸುವುದರೊಂದಿಗೆ ಇದು ರಸ್ತೆ ಸೇವೆಯಿಂದಾಗಿ ಉಂಟಾಗುವ ಬಹಳಷ್ಟು ಸಮಸ್ಯೆಗಳನ್ನ ಪರಿಹರಿಸುತ್ತದೆ, ಇದು ಸರಕು ಮತ್ತು ಸೇವೆಗಳ ಸಾಗಣೆ ಮತ್ತು ಪೂರೈಕೆಗೆ ಸಹಾಯ ಮಾಡುತ್ತದೆ. ಈ ಸೇವೆಯು ನಮ್ಮ ಜನರಿಗೆ ಪ್ರಗತಿಯನ್ನ ತರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಹೇಳಿದರು.