ಕಳೆದ ಒಂದು ತಿಂಗಳಲ್ಲಿ, ದೇಶದಿಂದ ಆಪಲ್ ಐಫೋನ್ ರಫ್ತಿನಲ್ಲಿ ಭಾರಿ ಜಿಗಿತ ಕಂಡುಬಂದಿದೆ ಮತ್ತು ಒಂದು ತಿಂಗಳಿಗೆ 1 ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್ಫೋನ್ಗಳನ್ನ ಭಾರತದಿಂದ ರಫ್ತು ಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಸುಮಾರು 8,100 ಕೋಟಿ ರೂ.ಗಳ ಮೌಲ್ಯದ ಸ್ಮಾರ್ಟ್ಫೋ ನ್ಗಳನ್ನ ದೇಶದಿಂದ ರಫ್ತು ಮಾಡಲಾಗಿದೆ. ಅದೇ ಸಮಯದಲ್ಲಿ, ಸ್ಮಾರ್ಟ್ಫೋನ್ ಉದ್ಯಮದ ಕೆಲವು ರಫ್ತುಗಳು ಡಿಸೆಂಬರ್ ತಿಂಗಳಲ್ಲಿ 10,000 ಕೋಟಿ ರೂ.ಗಳನ್ನ ದಾಟಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಅಂಕಿ ಅಂಶವು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಬಲವಾದ ಉತ್ತೇಜನ ನೀಡಲು ಕೆಲಸ ಮಾಡುತ್ತಿದೆ.
ಆಪಲ್ ಮತ್ತು ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳನ್ನ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸ ಲಾಗುತ್ತದೆ. ಆಪಲ್ ಒಂದು ತಿಂಗಳಲ್ಲಿ 1 ಬಿಲಿಯನ್ ಡಾಲರ್’ಗಿಂತ ಹೆಚ್ಚು ರಫ್ತು ಮಾಡುವ ಮೂಲಕ ರಫ್ತು ವಿಷಯದಲ್ಲಿ ಸ್ಯಾಮ್ ಸಂಗ್’ನ್ನ ಹಿಂದಿಕ್ಕಿದೆ ಮತ್ತು ದೇಶದ ಉನ್ನತ ಸ್ಮಾರ್ಟ್ ಫೋನ್ ರಫ್ತುದಾರನಾಗಿ ಮಾರ್ಪಟ್ಟಿದೆ.
ಭಾರತದಲ್ಲಿ ಒಟ್ಟು ಮೂರು ಪ್ರಮುಖ ಐಫೋನ್ ತಯಾರಕರಿದ್ದಾರೆ. ಅವುಗಳೆಂದರೆ ಫಾಕ್ಸ್ಕಾನ್ ಹೊನ್ ಹೈ, ಪೆಗಾಟ್ರಾನ್ ಮತ್ತು ವಿಸ್ಟ್ರಾನ್. ದೇಶದಲ್ಲಿ, ಈ ತಯಾರಕರು ತಮ್ಮ ಐಫೋನ್’ನ್ನ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದಲ್ಲಿ ತಯಾರಿಸುತ್ತಿದ್ದಾರೆ.