Thursday, 14th November 2024

ದೆಹಲಿ, ನೋಯ್ಡಾದ ಶಾಲೆಗಳಿಗೆ ಬಾಂಬ್​ ಬೆದರಿಕೆ ಇಮೇಲ್‌: ಶಾಲಾ ಮಕ್ಕಳು ಮನೆಗೆ ವಾಪಸ್

ನವದೆಹಲಿ: ದೆಹಲಿ ಮತ್ತು ನೋಯ್ಡಾದ 100ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್​ ಬೆದರಿಕೆ ಬಂದಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿ, ಭದ್ರತೆಯ ದೃಷ್ಟಿಯಿಂದ ಶಾಲಾ ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಲಾಯಿತು.

ಬಾಂಬ್ ಬೆದರಿಕೆ ಸಂದೇಶದ ನಂತರ, ಅಗ್ನಿಶಾಮಕ ದಳಳು ತಕ್ಷಣವೇ ಬಂದಿತ್ತು, ದೆಹಲಿ ಪೊಲೀಸರು ಮತ್ತು ಆಂಟಿ ಬಾಂಬ್ ಸ್ಕ್ವಾಡ್ ಜನರು ಸ್ಥಳಕ್ಕೆ ತಲುಪಿದರು.

ದೆಹಲಿ ಮತ್ತು ನೋಯ್ಡಾದ 100ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್​ ಬೆದರಿಕೆ ಬಂದಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್ ಬೆದರಿಕೆ ಸಂದೇಶದ ನಂತರ, ಅಗ್ನಿಶಾಮಕ ದಳ ತಕ್ಷಣವೇ ಬಂದಿತ್ತು, ದೆಹಲಿ ಪೊಲೀಸರು ಮತ್ತು ಆಂಟಿ ಬಾಂಬ್ ಸ್ಕ್ವಾಡ್ ಜನರು ಸ್ಥಳಕ್ಕೆ ತಲುಪಿದರು.

ದೆಹಲಿ-ಎನ್‌ಸಿಆರ್ ಸೇರಿದಂತೆ ಸುಮಾರು 100 ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲಾ ಗಿದೆ. ಎಲ್ಲೆಡೆ ಒಂದೇ ಇಮೇಲ್ ಕಳುಹಿಸಲಾಗಿದೆ. ದೆಹಲಿಯ 60ಕ್ಕೂ ಹೆಚ್ಚು ಶಾಲೆಗಳಿಂದ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಬಾಂಬ್ ಕರೆಗಳು ಬಂದಿದ್ದವು. ಆದರೆ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಈ ಸಂಖ್ಯೆ 40 ರ ಆಸುಪಾಸಿನಲ್ಲಿದೆ.

ಬಹುತೇಕ ಕಡೆ ತನಿಖೆ ಪೂರ್ಣಗೊಂಡಿದೆ. ಅನೇಕ ಜಗಜ್ SOP ಗಳನ್ನು ಇನ್ನೂ ಅನುಸರಿಸಲಾಗುತ್ತಿದೆ. ಇಮೇಲ್ ಕಳುಹಿಸುವವರ IP ವಿಳಾಸವನ್ನು ಇನ್ನೂ ಗುರುತಿಸಲಾಗಿಲ್ಲ. ದ್ವಾರಕಾದಲ್ಲಿರುವ ಡಿಪಿಎಸ್ ಶಾಲೆಗೆ ಮೊದಲು ಇಮೇಲ್ ಬಂದಿತ್ತು, ಬಳಿಕ ಶಾಲೆಯ ಆಡಳಿತ ಮಂಡಳಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಿದ್ದಾರೆ. ಬಾಂಬ್ ಸ್ಕ್ವಾಡ್ ಭದ್ರತಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತಲುಪಿದೆ.