ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees Provident Fund Organisation) 2024ರ ಜುಲೈನಲ್ಲಿ ಮಾಸಿಕ ವೇತನ (monthly payroll) ಪಡೆಯುವ ಅತೀ ಹೆಚ್ಚು ಅಂದರೆ 19.94 ಲಕ್ಷ ಹೊಸ ಸದಸ್ಯರನ್ನು (new member) ಸೇರ್ಪಡೆಗೊಳಿಸಿದೆ. 2018ರ ಏಪ್ರಿಲ್ ತಿಂಗಳಿಂದ ವೇತನದಾರರ ಮಾಹಿತಿ ಸಂಗ್ರಹ ಆರಂಭವಾದ ಬಳಿಕ ಇದು ದಾಖಲಾದ ಅತ್ಯಧಿಕ ಸಂಖ್ಯೆಯಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ (Ministry of Labour and Employment) ಮಾಹಿತಿ ತಿಳಿಸಿದೆ.
ಮೋದಿ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮ ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದು ಭಾರತದ ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿಯನ್ನು ತೋರಿಸುತ್ತಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ ಹೊಸದಾಗಿ ಸೇರ್ಪಡೆಯಾದವರಲ್ಲಿ 10.52 ಲಕ್ಷ ಮಂದಿ ಮೊದಲ ಬಾರಿಗೆ ಉದ್ಯೋಗಿಗಳಾಗಿದ್ದಾರೆ. 2024ರ ಜೂನ್ ಗಿಂತ ಶೇ. 2.66ರಷ್ಟು ಹೆಚ್ಚಳವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 2.43ರಷ್ಟು ಏರಿಕೆಯಾಗಿದೆ ಎಂದು ಇಪಿಎಫ್ಒ ಅಂಕಿ ಅಂಶಗಳು ಸೂಚಿಸುತ್ತವೆ. ವಿಸ್ತರಿಸುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಯುವಕ, ಯುವತಿಯರಿಗೆ ಅವಕಾಶಗಳು ಹೆಚ್ಚಾಗುತ್ತಿದೆ ಎಂಬುದನ್ನು ಈ ಅಂಕಿ ಅಂಶಗಳು ತೋರಿಸಿವೆ.
ದೇಶದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್ ಯೋಜನೆ (ಪಿಎಲ್ಐ), ಸ್ಟಾರ್ಟ್ಅಪ್ ಇಂಡಿಯಾ ಆಂದೋಲನ, ಉದ್ಯೋಗ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ ಮತ್ತು ಕ್ಯಾಪೆಕ್ಸ್ ಡ್ರೈವ್ಗಳಂತಹ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ವರ್ಷವಾರು ವೇತನದಾರರು ಹೆಚ್ಚಾಗುತ್ತಿರುವುದು ವಿವಿಧ ಯೋಜನೆಗಳ ಪ್ರಗತಿಯ ಲಕ್ಷಣಗಳಾಗಿವೆ. 2022- 23ರಲ್ಲಿ138.52 ಲಕ್ಷ ವೇತನದಾರರು ಸೇರ್ಪಡೆಯಾಗಿದ್ದರೆ 2023- 24ರಲ್ಲಿ ಈ ಸಂಖ್ಯೆ 131.48 ಲಕ್ಷವಾಗಿತ್ತು. 2024ರ ಜುಲೈ ತಿಂಗಳಲ್ಲಿ 8.77 ಲಕ್ಷ ಯುವ ಅಂದರೆ 18-25 ವಯಸ್ಸಿನವರು ಇಪಿಎಫ್ ಒಗೆ ಸೇರ್ಪಡೆಯಾಗಿದ್ದಾರೆ. ಈ ಸಂಖ್ಯೆಯಲ್ಲೂ ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ.
6.25 ಲಕ್ಷ ಮಂದಿ ಮೊದಲ ಬಾರಿಗೆ ಉದ್ಯೋಗಿಗಳಾಗಿದ್ದು, ಜುಲೈ ತಿಂಗಳಲ್ಲಿ ಒಟ್ಟು ಹೊಸದಾಗಿ ಸೇರ್ಪಡೆಗೊಂಡವರಲ್ಲಿ ಶೇಕಡಾ 59.41 ರಷ್ಟಿದ್ದಾರೆ. ಈ ಬೆಳವಣಿಗೆಗೆ ರಾಷ್ಟ್ರೀಯ ವೃತ್ತಿ ಸೇವೆಯಂತಹ (NCS) ಉಪಕ್ರಮಗಳಿಂದ ಎನ್ನಬಹುದು.
2024ರ ಜುಲೈ ತಿಂಗಳಲ್ಲಿ ಮಹಿಳಾ ಉದ್ಯೋಗಿಗಳ ಸೇರ್ಪಡೆಯೂ ಹೆಚ್ಚಳವಾಗಿದೆ. 4.41 ಲಕ್ಷ ಮಹಿಳೆಯರು ಉದ್ಯೋಗ ವಲಯಕ್ಕೆ ಸೇರ್ಪಡೆಯಾಗಿದ್ದು, ಇದರಲ್ಲಿ 3.05 ಲಕ್ಷ ಹೊಸ ಸೇರ್ಪಡೆಯಾಗಿದೆ.
ಮಹಿಳಾ ಉದ್ಯೋಗಿಗಳ ಸಂಖ್ಯೆಯು ಶೇ. 14.41ರಷ್ಟು ಹೆಚ್ಚಾಗಿದೆ. ಹೊಸ ಮಹಿಳಾ ಸದಸ್ಯರ ಸಂಖ್ಯೆಯು ಶೇ. 10.94ರಷ್ಟು ಹೆಚ್ಚಾಗಿದೆ. ಮಹಿಳಾ ಉದ್ಯೋಗದಲ್ಲಿನ ಈ ಗಣನೀಯ ಏರಿಕೆಯು ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಉದ್ಯೋಗಿ ಮಹಿಳಾ ಹಾಸ್ಟೆಲ್ಗಳಂತಹ ಬೆಂಬಲ ಸೇವೆಗಳಿಗೆ ಪ್ರವೇಶವನ್ನು ಸುಧಾರಿಸುವಲ್ಲಿ ಸರ್ಕಾರದ ಗಮನವನ್ನು ಪ್ರತಿಬಿಂಬಿಸುತ್ತದೆ.
ಉದ್ಯೋಗ ವಲಯದ ಮಾಹಿತಿ ಪ್ರಕಾರ 2024ರ ಜುಲೈ ತಿಂಗಳಲ್ಲಿ ಅತ್ಯಧಿಕ ಉದ್ಯೋಗಿಗಳ ಸೇರ್ಪಡೆಗಳಲ್ಲಿ ಉನ್ನತ ವಲಯಗಳಲ್ಲಿ ಉತ್ಪಾದನೆ, ಮಾರುಕಟ್ಟೆ ಸೇವೆ, ಕಂಪ್ಯೂಟರ್ ಬಳಕೆ, ಕಟ್ಟಡ ಮತ್ತು ನಿರ್ಮಾಣ ಕಾರ್ಯಗಳು ಸೇರಿವೆ. ಕೈಗಾರಿಕೆಗಳು ಒಟ್ಟಾರೆಯಾಗಿ 2 ಲಕ್ಷಕ್ಕೂ ಹೆಚ್ಚು ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದ್ದು, ಇದರಲ್ಲಿ ಪರಿಣಿತ ಸೇವೆ, ಎಲೆಕ್ಟ್ರಾನಿಕ್ ಮಾಧ್ಯಮ ಕಂಪೆನಿ ಮತ್ತು ಬ್ಯಾಂಕ್ಗಳು ಸೇರಿವೆ.
ಮಹಿಳಾ ಉದ್ಯೋಗಿಗಳ ಸಂಖ್ಯೆಯು ಶೇ. 14.41ರಷ್ಟು ಹೆಚ್ಚಾಗಿದೆ. ಹೊಸ ಮಹಿಳಾ ಸದಸ್ಯರ ಸಂಖ್ಯೆಯು ಶೇ. 10.94 ರಷ್ಟು ಹೆಚ್ಚಾಗಿದೆ. ಮಹಿಳಾ ಉದ್ಯೋಗದಲ್ಲಿನ ಈ ಗಣನೀಯ ಏರಿಕೆಯು ಶಿಕ್ಷಣ, ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಉದ್ಯೋಗಿ ಮಹಿಳಾ ಹಾಸ್ಟೆಲ್ಗಳಂತಹ ಬೆಂಬಲ ಸೇವೆಗಳಿಗೆ ಪ್ರವೇಶವನ್ನು ಸುಧಾರಿಸುವಲ್ಲಿ ಸರ್ಕಾರದ ಗಮನವನ್ನು ಪ್ರತಿಬಿಂಬಿಸುತ್ತದೆ.
Google Job: ಸರಕಾರಿ ಕಾಲೇಜಿನಲ್ಲಿ ಓದಿ ಗೂಗಲ್ನಲ್ಲಿ 2 ಕೋಟಿ ರೂಪಾಯಿ ವೇತನದ ಕೆಲಸ ಪಡೆದ ಯುವಕ
ಉದ್ಯೋಗ ವಲಯದ ಮಾಹಿತಿ ಪ್ರಕಾರ 2024ರ ಜುಲೈ ತಿಂಗಳಲ್ಲಿ ಅತ್ಯಧಿಕ ಉದ್ಯೋಗಿಗಳ ಸೇರ್ಪಡೆಗಳಲ್ಲಿ ಉನ್ನತ ವಲಯಗಳಲ್ಲಿ ಉತ್ಪಾದನೆ, ಮಾರುಕಟ್ಟೆ ಸೇವೆ, ಕಂಪ್ಯೂಟರ್ ಬಳಕೆ, ಕಟ್ಟಡ ಮತ್ತು ನಿರ್ಮಾಣ ಕಾರ್ಯಗಳು ಸೇರಿವೆ. ಕೈಗಾರಿಕೆಗಳು ಒಟ್ಟಾರೆಯಾಗಿ 2 ಲಕ್ಷಕ್ಕೂ ಹೆಚ್ಚು ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದ್ದು, ಇದರಲ್ಲಿ ಪರಿಣಿತ ಸೇವೆ, ಎಲೆಕ್ಟ್ರಾನಿಕ್ ಮಾಧ್ಯಮ ಕಂಪನಿ ಮತ್ತು ಬ್ಯಾಂಕ್ಗಳು ಸೇರಿವೆ.