ಶೋಪಿಯಾನಾ: ಬುಧವಾರ ರಾತ್ರಿ ಜಮ್ಮು ಕಾಶ್ಮೀರದ ಶೋಪಿಯಾನ್ ನ ಕಾಶ್ವಾ ಗ್ರಾಮದಲ್ಲಿ ಎನ್ಕೌಂಟರ್ ಆರಂಭವಾಗಿದ್ದು, ಗುಂಡಿನ ದಾಳಿ ನಡೆಸಲಾಗಿದೆ. ಈ ಎನ್ಕೌಂಟರ್ ನಲ್ಲಿ ಭಯೋತ್ಪಾ ದಕನನ್ನು ಹತ್ಯೆ ಮಾಡಲಾಗಿದೆ.
ಭಯೋತ್ಪಾದಕ ಅನಾಯತ್ ಅಶ್ರಫ್ ದಾರ್ ನಾಗರಿಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಬಗ್ಗೆ ಭದ್ರತಾ ಪಡೆಗಳು ಮಾಹಿತಿ ಪಡೆದುಕೊಂಡಿವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಉಗ್ರರು ಪ್ರತೀಕಾರ ತೀರಿಸಿಕೊಳ್ಳುವ ಮೂಲಕ ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ ಆಗಿ ಬದಲಾಗಿದೆ. ಭಯೋತ್ಪಾದಕನಿಗೆ ಶರಣಾಗಲು ಅವಕಾಶ ನೀಡಲಾಗಿತ್ತು.
ದಾರ್ ಈ ಹಿಂದೆ ಅಂಡರ್ ಗ್ರೌಂಡ್ ವರ್ಕ್ ಮಾಡ್ತಿದ್ದನಲ್ಲದೇ, ಡ್ರಗ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದು, ಎನ್ ಕೌಂಟರ್ ನಂತರ ಆತನ ಬಳಿಯಿದ್ದ ಒಂದು ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಯಗೊಂಡ ನಾಗರಿಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸ ಲಾಗಿದೆ.