ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ)ದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಿಸುವಂತೆ ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದೆ.
ಮಿಶ್ರಾ ಅವಧಿ ವಿಸ್ತರಿಸುವಂತೆ ಕೋರಿ ಸಾಲಿಸಿಟರ್ ಜನರಲ್(ಎಸ್ಜಿ) ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ಪೀಠದ ಮುಂದೆ ಅರ್ಜಿ ಸಲ್ಲಿಸಿ ದ್ದಾರೆ.
ಶುಕ್ರವಾರಕ್ಕೂ ಮೊದಲು ತಮ್ಮ ಅರ್ಜಿಯನ್ನು ಪಟ್ಟಿ ಮಾಡುವಂತೆ ಬಿಆರ್ ಗವಾಯಿ ಪೀಠಕ್ಕೆ ಒತ್ತಾಯಿಸಿದ ಮೆಹ್ತಾ, “ನಾವು ಈ ನ್ಯಾಯಾಲಯವನ್ನು ಮನವೊಲಿಸಲು ಕೆಲವು ಪ್ರಾರ್ಥನೆಗಳನ್ನು ಮಾಡುತ್ತಿದ್ದೇವೆ. ದಯವಿಟ್ಟು ಜು.28ಕ್ಕೂ ಮುನ್ನ ಪಟ್ಟಿ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಮೆಹ್ತಾ ಅವರ ಮನವಿಯನ್ನು ಪರಿಗಣಿಸಿದ ನ್ಯಾಯಾಧೀಶರು, ಜು.27 ರಂದು ಮಧ್ಯಾಹ್ನ 3:30 ಕ್ಕೆ ಅರ್ಜಿ ವಿಚಾರಣೆ ನಡೆಸಲು ಒಪ್ಪಿಕೊಂಡಿದ್ದಾರೆ.
ಜು.11 ರಂದು ನೀಡಲಾದ ಸುಪ್ರೀಂ ಕೋರ್ಟ್ ತೀರ್ಪಿನ ಮಾರ್ಪಾಡು ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಇಡಿ ನಿರ್ದೇಶಕರಿಗೆ ಮೂರನೇ ಬಾರಿ ಅಧಿಕಾರಾವಧಿ ವಿಸ್ತರಿಸಿದ್ದ ಕೇಂದ್ರದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.