Thursday, 24th October 2024

ಇಡಿ ನಿರ್ದೇಶಕ ಮಿಶ್ರಾ ಸೇವಾವಧಿ ವಿಸ್ತರಣೆಗೆ ನಕಾರ

ನವದೆಹಲಿ: ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಸೇವಾವಧಿ ವಿಸ್ತರಣೆಗೆ ಸುಪ್ರೀಂ ಕೋರ್ಟ್​ ನಿರಾಕರಿಸಿದೆ.

ಜುಲೈ 31ರವರೆಗೆ ಈ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಮೂರನೇ ಬಾರಿಗೆ ಸೇವಾವಧಿ ವಿಸ್ತರಣೆ ಸರಿಯಲ್ಲ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ. ಸೇವಾವಧಿ ವಿಸ್ತರಣೆಗೆ ಸಂಬಂಧಿಸಿದ ಕಾನೂನು ತಿದ್ದುಪಡಿ ಸರಿಯಾಗಿದೆ ಎಂದು ಕೋರ್ಟ್​ ಹೇಳಿದೆ.

ತನಿಖಾ ಸಂಸ್ಥೆಯ ಮುಖ್ಯಸ್ಥರಾಗಿ ಸಂಜಯ್ ಕುಮಾರ್ ಮಿಶ್ರಾ ಅವರ ಮುಂದುವರಿಕೆಗೆ ಕೇಂದ್ರದ ಹಸಿರು ನಿಶಾನೆಯ ವಿರುದ್ಧದ ಅರ್ಜಿಯನ್ನು ಆಲಿಸಿದ ಕೋರ್ಟ್, ಮೂರನೇ ವಿಸ್ತರಣೆಯನ್ನು ರದ್ದುಪಡಿಸಿದೆ ಮತ್ತು ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಯಾಗಿದೆ ಎಂದು ಹೇಳಿದೆ.

ಸಂಜಯ್ ಮಿಶ್ರಾ ಅವರನ್ನು ಮೊದಲು 2018ರ ನವೆಂಬರ್ 19ರಂದು ಎರಡು ವರ್ಷಗಳ ಅವಧಿಗೆ ಇಡಿ ನಿರ್ದೇಶಕರನ್ನಾಗಿ ನೇಮಿಸಲಾಯಿತು. ನವೆಂಬರ್ 2020ಕ್ಕೆ ಅವರ ಅಧಿಕಾರಾವಧಿ ಕೊನೆಗೊಳ್ಳಬೇಕಿತ್ತು, ಅದಕ್ಕೂ ಮೊದಲೇ ಮೇ ತಿಂಗಳಲ್ಲಿಯೇ ಅವರ ವಯಸ್ಸು 60 ಆಗಿತ್ತು. ನವೆಂಬರ್ 2020ರಲ್ಲಿ ಅವರ ಅವಧಿ ಮುಗಿಯುವ ಮೊದಲು ಕೇಂದ್ರ ಸರ್ಕಾರವು ಅವರ ಅಧಿಕಾರಾವಧಿ ಯನ್ನು ಎರಡು ವರ್ಷಗಳ ಬದಲಿಗೆ ಮೂರು ವರ್ಷಗಳವರೆಗೆ ವಿಸ್ತರಿಸಿತ್ತು.