Thursday, 12th December 2024

ಇಂಗ್ಲೆಂಡಿಗೆ ಆರಂಭದಲ್ಲೇ ಆಘಾತ: ಬಟ್ಲರ್‌ ಡಕ್ ಔಟ್‌

ಅಹಮದಾಬಾದ್‌: ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಚುಟುಕು ಪಂದ್ಯದಲ್ಲಿ ಟೀಂ ಇಂಡಿಯಾ ಪ್ರವಾಸಿ ಇಂಗ್ಲೆಂಡ್‌ ತಂಡಕ್ಕೆ ಆರಂಭಿಕ ಆಘಾತ ನೀಡಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆರಿಸಿಕೊಂಡ ಭಾರತ ಪ್ರವಾಸಿಗರನ್ನು ಬ್ಯಾಟಿಂಗಿಗೆ ಇಳಿಸಿ, ಮೊದಲ ಓವರಿನ ಮೂರನೇ ಎಸೆತದಲ್ಲೇ ಅಪಾಯಕಾರಿ ಜೋಸ್‌ ಬಟ್ಲರ್‌ ನನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಕಳಿಸಿತು. ಸ್ವಿಂಗ್‌ ಬೌಲರ್‌ ಭುವನೇಶ್ವರ್‌ ಕುಮಾರ್‌ ತಂಡಕ್ಕೆ ಆರಂಭಿಕ ಯಶ ತಂದುಕೊಟ್ಟರು.

ಎರಡನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿತ್ತು. ಆರಂಭಿಕ ಶಿಖರ್‌ ಧವನ್‌ ಹಾಗೂ ಆಲ್ರೌಂಡರ್‌ ಅಕ್ಷರ್‌ ಪಟೇಲ್‌ ಬದಲು ಸೂರ್ಯಕುಮಾರ್‌ ಯಾದವ್‌ ಹಾಗೂ ಇಶಾನ್‌ ಕಿಶನ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಬ್ಬರಿಗೂ ಇದು ಪಾದಾರ್ಪಣಾ ಪಂದ್ಯವಾಗಿದೆ. ಇತ್ತ ಪ್ರವಾಸಿ ತಂಡದಲ್ಲೂ ಮಾರ್ಕ್‌ ವುಡ್‌ ಬದಲು ಟಾಮ್ ಕುರ‍್ರನ್‌ ಆಡುವ ಬಳಗದಲ್ಲಿ ಜಾಗ ಪಡೆದರು.