ನವದೆಹಲಿ : ಸ್ವಾಮಿತ್ವ ಯೋಜನೆಯ ಆರಂಭಿಕ ಹಂತದಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ್, ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಪ್ರಾರಂಭಿಸ ಲಾಯಿತು. ಈ ರಾಜ್ಯಗಳಲ್ಲಿ 22 ಲಕ್ಷ ಕುಟುಂಬಗಳಿಗೆ ಆಸ್ತಿ ಕಾರ್ಡ್ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮಧ್ಯಪ್ರದೇಶದಲ್ಲಿ ಸ್ವಾಮಿತ್ವ ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಯೋಜನೆಯ ಕಾರಣದಿಂದಾಗಿ ಬಹಳಷ್ಟು ಜನರು ಬ್ಯಾಂಕಿನಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದು ಉತ್ತಮ ಜೀವನಕ್ಕೆ ಅನುಕೂಲ ಮಾಡಿಕೊಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಆರಂಭಿಕ ಹಂತದಲ್ಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ್, ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಕರ್ನಾಟಕದಲ್ಲಿ ಪ್ರಧಾನಿ ಸ್ವಾಮಿತ್ವಾ ಯೋಜನೆಯನ್ನ ಕೆಲವು ಹಳ್ಳಿಗಳಲ್ಲಿ ಪ್ರಾರಂಭಿಸಲಾಯಿತು.
‘ಆಸ್ತಿ ಮಾಲೀಕತ್ವದ ಸ್ಥಾಪನೆಯ ಯೋಜನೆಯಾದ ಸ್ವಾಮಿತ್ವ ಯೋಜನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತರಲಾಗು ವುದು. ಗ್ರಾಮೀಣ ಅಭಿವೃದ್ಧಿಗೆ ಉತ್ತಮ ಪರಿಸರ ವ್ಯವಸ್ಥೆಯನ್ನು ಒದಗಿಸಲು ಆಸ್ತಿ ಕಾರ್ಡ್ʼಗಳು ಸಹಾಯ ಮಾಡುತ್ತವೆ. ಎಂದು ಪ್ರಧಾನಿ ಹೇಳಿದರು.
ಮಧ್ಯಪ್ರದೇಶ ರಾಜ್ಯವು ಈ ಯೋಜನೆಯನ್ನು ವೇಗವಾಗಿ ಕೆಲಸ ಮಾಡಿದೆ ಮತ್ತು ಅದಕ್ಕಾಗಿ ಮೆಚ್ಚುಗೆಗೆ ಅರ್ಹವಾಗಿದೆ. ಇಂದು, 3000 ಹಳ್ಳಿಗಳ 1.70 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸಮೃದ್ಧಿಯನ್ನು ತರುವ ಆಸ್ತಿ ಕಾರ್ಡ್ ‘ಅಧಿಕಾರ್ ಅಭಿಲೇಖ್’ ಅನ್ನು ಪಡೆದಿವೆ’ ಎಂದರು.