Thursday, 21st November 2024

ಈರೋಡ್ ಪೂರ್ವ ಉಪಚುನಾವಣೆಯ ಮತದಾನ ಆರಂಭ

ಚೆನ್ನೈ: ರೋಡ್ ಪೂರ್ವ ಉಪಚುನಾವಣೆಯ ಮತದಾನ ಸೋಮವಾರ ಆರಂಭವಾಗಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಜೊತೆಗೆ ನಾಮ್ ತಮಿಜ್ಲರ್ ಕಚ್ಚಿ (ಎನ್‌ಟಿಕೆ) ಈರೋಡ್ ಪೂರ್ವ ಉಪಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 52 ಸ್ಥಳಗಳಲ್ಲಿ 238 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 1206 ಅಧಿಕಾರಿಗಳು, 286 ಪ್ರಿಸೈಡಿಂಗ್ ಅಧಿಕಾರಿಗಳು, 858 ಮತಗಟ್ಟೆ ಅಧಿಕಾರಿಗಳು ಮತ್ತು 62 ಹೆಚ್ಚುವರಿ ಅಧಿಕಾರಿ ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಡಿಎಂಕೆ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಇವಿಕೆಎಸ್ ಇಳಂಗೋವನ್ ಮತ್ತು ಎಐಎಡಿಎಂಕೆ ಅಭ್ಯರ್ಥಿ ತೆನ್ನರಸು ನಡುವೆ ತೀವ್ರ ಪೈಪೋಟಿ ಯೊಂದಿಗೆ 77 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾಂಗ್ರೆಸ್ ಶಾಸಕ ತಿರುಮಹನ್ ಈವೀರಾ ಅವರ ಹಠಾತ್ ನಿಧನದಿಂದ ಕ್ಷೇತ್ರದಲ್ಲಿ ಚುನಾವಣೆ ಅನಿವಾರ್ಯ ವಾಗಿತ್ತು. ಕಾಂಗ್ರೆಸ್ ಹಿರಿಯ ನಾಯಕ ಇವಿಕೆಎಸ್ ಇಳಂಗೋವನ್ ಅವರು ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದ್ದಾರೆ.

ಡಿಎಂಕೆ ಸರ್ಕಾರ ರಚನೆಯಾದ ನಂತರ ಇದು ಮೊದಲ ಉಪಚುನಾವಣೆಯಾಗಿದ್ದು, ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ತಂಡ ಇದನ್ನು ಪ್ರತಿಷ್ಠಿತ ಕದನವಾಗಿ ಪರಿಗಣಿಸಿದೆ.