Thursday, 12th December 2024

ಈರೋಡ್ ವೆಸ್ಟ್‌: ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ

ವದೆಹಲಿ: ಹಲವು ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶವು ಗುರುವಾರ ಪ್ರಕಟವಾಗುತ್ತಿದೆ.

ತಮಿಳುನಾಡಿನ ಈರೋಡ್ ವೆಸ್ಟ್‌ನಲ್ಲಿ ಡಿಎಂಕೆ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ, ಪಶ್ಚಿಮ ಬಂಗಾಳದ ಸಾಗರ್ದಿಘಿ ಕ್ಷೇತ್ರದಲ್ಲೂ ಕಾಂಗ್ರೆಸ್ ಮುನ್ನಡೆ ಯನ್ನು ಕಾಯ್ದುಕೊಂಡಿದೆ.

ಮತ್ತೊಂದೆಡೆ, ಪುಣೆಯ ಚಿಂಚವಾಡಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯು ಮುನ್ನಡೆಯಲ್ಲಿದ್ದಾರೆ. ಅದೇ ರೀತಿ ಕಸಬಾಪೇಟ್‌ನಲ್ಲಿ ಮಹಾ ವಿಕಾಸ್ ಅಘಾಡಿ ಅಭ್ಯರ್ಥಿ ಮುಂದಿದ್ದಾರೆ.

ತಿರುಮಹಾನ್ ಎವೆರಾ, ಜಂಬೆ ತಾಶಿ, ಸುಬ್ರತಾ ಸಹಾ ಅವರ ನಿಧನದ ನಂತರ ತೆರವಾದ ತಮಿಳುನಾಡಿನ ಈರೋಡ್ ಪೂರ್ವ ಕ್ಷೇತ್ರ, ಅರುಣಾಚಲ ಪ್ರದೇಶದ ಲುಮ್ಲಾ ಮತ್ತು ಪಶ್ಚಿಮ ಬಂಗಾಳದ ಸಾಗರ್ದಿಘಿ ಕ್ಷೇತ್ರಕ್ಕೆ ಫೆಬ್ರವರಿ 27 ರಂದು ಉಪಚುನಾವಣೆ ನಡೆದಿತ್ತು.

ಜಾರ್ಖಂಡ್‌ನ ರಾಮಗಢಕ್ಕೆ ಸಂಬಂಧಿಸಿದಂತೆ, ಮಮತಾ ದೇವಿ ಅವರ ಅನರ್ಹತೆಯಿಂದಾಗಿ ಆ ಸ್ಥಾನವು ತೆರವಾಗಿತ್ತು.