Thursday, 19th September 2024

Bajaj Pulsar NS160 : ಸಿಎನ್‌ಜಿ ಆಯಿತು, ಎಥೆನಾಲ್‌ನಿಂದಲೂ ಓಡುವ ಬೈಕ್‌ ಮಾರುಕಟ್ಟೆಗೆ ಇಳಿಸಲಿದೆ ಬಜಾಜ್‌

Bajaj Pulsar NS160

ಬೆಂಗಳೂರು: ಪರಿಸರ ಸ್ನೇಹಿ ಇಂಧನಗಳ ಮೂಲಕ ಓಡುವ ಬೈಕ್‌ಗಳ ತಯಾರಿಕೆಯನ್ನು ಮುಂಚೂಣಿ ಪಾತ್ರ ವಹಿಸಿರುವ ಬಜಾಜ್‌ ಕಂಪನಿಯು ತಿಂಗಳ ಹಿಂದೆ ಸಿಎನ್‌ಜಿಯಿಂದ ಓಡುವ ಫ್ರೀಡಂ ಬೈಕ್‌ ಅನ್ನು ಬಿಡುಗಡೆ ಮಾಡಿತ್ತು. ಅತ್ಯಧಿಕ ಮೈಲೇಜ್‌ ನೀಡುವ ಈ ಬೈಕ್‌ ಜನಪ್ರಿಯತೆ ಪಡೆಯುವ ಎಲ್ಲ ಸಾಧ್ಯತೆಗಳೂ ಇವೆ. ಇದೀಗ ಅದೇ ಕಂಪನಿ ಎಥೆನಾಲ್‌ ಮೂಲಕ ಓಡುವ ಬೈಕ್‌ ಒಂದನ್ನು ಪ್ರದರ್ಶಿಸಿದೆ. ಅದುವೇ ಎಥೆನಾಲ್ ಚಾಲಿತ ಪಲ್ಸರ್ ಎನ್ ಎಸ್ 160 (Bajaj Pulsar NS160). ಈ ಎರಡೂ ಬೈಕ್‌ಗಳನ್ನು ಇಂಡಿಯಾ ಬಯೋ ಎನರ್ಜಿ & ಟೆಕ್ (ಐಬಿಇಟಿ) ಎಕ್ಸ್ ಪೋ 2024ರಲ್ಲಿ ಬಜಾಜ್ ಕಂಪನಿ ಪ್ರದರ್ಶಿಸಿತ್ತು. ಈ ಸುದ್ದಿ ಆ ವೇಳೆಯೇ ಸಂಚಲನ ಮೂಡಿಸಿತ್ತು. ಅಂತೆಯೇ  ಫ್ರೀಡಂ 125 ಸಿಎನ್‌ಜಿ ಬಿಡುಗಡೆಗೊಂಡಾಗಿದೆ. ಇದೀಗ ಎಥೆನಾಲ್ ಚಾಲಿತ ಪಲ್ಸರ್ ಎನ್ ಎಸ್ 160ಗೆ ಕಾಯಬೇಕಾಗಿದೆ.

ಇ100 ಪಲ್ಸರ್ ಎನ್ ಎಸ್ 160 ಬೈಕ್ ಮೊದಲ ಬಾರಿಗೆ ಅನಾವರಣ ಮಾಡಲಾಗಿದ್ದು, ಇಂಧನ ಟ್ಯಾಂಕ್ ಮತ್ತು ಎಂಜಿನ್‌ಗೆ ಪೂರೈಕೆ ವ್ಯವಸ್ಥೆಯು ಬದಲಾವಣೆ ಆಗಿರಲಿದೆ. ಎಥೆನಾಲ್‌ನ ಕೊರೆಯುವ ಸ್ವಭಾವನ್ನು ತಡೆಯುವುದಕ್ಕಾಗಿ ಎಂಜಿನ್‌ ಒಳಗಿನ ವಿನ್ಯಾಸವೂ ಬದಲಾಗುವ ಸಾಧ್ಯತೆಗಳಿವ

ನಿಖರವಾಗಿ ಹೇಳುವುದಾದರೆ, ಇದು ಫ್ಲೆಕ್ಸ್-ಫ್ಯೂಯಲ್ ಮೋಟಾರ್‌ಸೈಕಲ್‌ ಆಗಿರಲಿದೆ.  100 ಪ್ರತಿಶತ ಎಥೆನಾಲ್‌ ಮೂಲಕವೇ ಚಲಿಸುತ್ತದೆ. ಜತೆಗೆ ಪೆಟ್ರೋಲ್ ಮತ್ತು ಎಥೆನಾಲ್ ಮಿಶ್ರಣದಲ್ಲೂ ಚಲಿಸುವ ಸಾಮರ್ಥ್ಯ ಹೊಂದಿರಲಿದೆ.  ಬಜಾಜ್ ಕಂಪನಿಯು ಈಗಾಗಲೇ ಬ್ರೆಜಿಲ್‌ನಂಥ ದಕ್ಷಿಣ ಅಮೆರಿಕಾದ ದೇಶಗಳಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.  ಆ ದೇಶಗಳಲ್ಲಿ ಎಥೆನಾಲ್ ಅನ್ನು ಸ್ಥಳೀಯ ಸರ್ಕಾರವು ವ್ಯಾಪಕವಾಗಿ ಬಳಸುತ್ತದೆ . ಆ ಮಟ್ಟಿಗೆ, ಬಜಾಜ್ ಈಗಾಗಲೇ ಬ್ರೆಜಿಲ್‌ನಲ್ಲಿ ಇ 27 ಹೊಂದಿಕೆಯಾಗುವ ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಈ ವಾಹನಗಳು ಪೆಟ್ರೋಲ್ ಜತೆಗೆ ಶೇಕಾಡ 27  ಎಥೆನಾಲ್ ಮಿಶ್ರಿತ ಇಂಧನದಲ್ಲಿ ಚಲಿಸುತ್ತದೆ. ಆದಾಗ್ಯೂ ಕಂಪನಿಯು ಇದೇ ಮೊದಲ ಬಾರಿಗೆ ಎಥೆಲಾನ್‌ 100 ಮೋಟಾರ್ ಸೈಕಲ್ ಅನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ : Jawa 42 FJ : 1.99 ಲಕ್ಷ ರೂಪಾಯಿ ಬೆಲೆಯಲ್ಲಿ ರಸ್ತೆಗೆ ಇಳಿಯಿತು ಹೊಸ ಜಾವಾ ಮೋಟಾರ್‌ಸೈಕಲ್‌

ಬೈಕಿನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ ಆದರೆ ಮೂಲ ಎಂಜಿನ್ ಹಾರ್ಡ್‌ವೇರ್ ಪ್ರಸ್ತುತ ಎನ್‌ಎಸ್ 160 ನಂತೆಯೇ ಇರುತ್ತದೆ. ಇದು ಆಯಿಲ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಸುತ್ತದೆ. ಭಾರತದಲ್ಲಿ ಮಾರಾಟವಾಗುವ ಇ20 ಕಾಂಪ್ಲೈಂಟ್ ಪಲ್ಸರ್‌ ಬೈಕ್‌ಗಳು 17.2 ಬಿಹೆಚ್‌ಪಿ ಪವರ್‌ ಹಾಗೂ  14.6 ಎನ್ಎಂ ಟಾರ್ಕ್‌ ಬಿಡುಗಡೆ ಮಾಡುತ್ತದೆ. ಆದರೆ, ಎಥೆನಾಲ್‌ 100 ಬೈಕ್ ಸ್ವಲ್ಪ ಭಿನ್ನವಾಗಿ ಪವರ್‌ ಪ್ರೊಡ್ಯೂಸ್‌ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಎಥೆನಾಲ್‌ಗೆ ಕೊರೆಯುವ ಸ್ವಭಾವ ಇದೆ. ಹೀಗಾಗಿ ಅದರನ್ನು ನಿರ್ವಹಿಸಲು ಇಂಧನ ಟ್ಯಾಂಕ್ ಮತ್ತು ಪ್ಯೂಯಲ್‌ ಇಂಜೆಕ್ಟರ್‌ ವ್ಯವಸ್ಥೆಯ ಹಾರ್ಡ್‌ವೇರ್ ಬದಲಾವಣೆಗಳು ಆಗುವುದ ನಿಶ್ಚಿತ. ಎಥೆನಾಲ್ ಮಿಶ್ರಣದ ವಿಭಿನ್ನ ಅನುಪಾತಗಳಿಗೆ ಪೂರಕವಾಗಿರುವ ನಿಟ್ಟಿನಲ್ಲಿ ಎಂಜಿನ್ ನಿರ್ವಹಣಾ ವ್ಯವಸ್ಥೆಯಲ್ಲಿ ಬದಲಾವಣೆ ನಡೆಯಲಿದೆ.

ಎಥೆನಾಲ್ ಪೆಟ್ರೋಲ್‌ಗಿಂತ ಅಗ್ಗದ ದರದಲ್ಲಿ ಸಿಗುವ ಇಂಧನವಾಗಿದೆ. ಇದು ಹೊಗೆಯ ಹೊರಸೂಸುವಿಕೆಯ ಪ್ರಮಾಣವೂ ಕಡಿಮೆ ಹೊಂದಿದೆ.  ಭಾರತ ಸರ್ಕಾರವು ಕೆಲವು ಸಮಯದಿಂದ ಎಥೆನಾಲ್-ಮಿಶ್ರಿತ ಇಂಧನಗಳಿಗೆ ಪ್ರೇರಣೆ ನೀಡಲು ಉತ್ಸುಕವಾಗಿದೆ. ಅದಕ್ಕೆ ಪೂರಕವಾಗಿ ಬಜಾಜ್‌ ಸಂಪೂರ್ಣ ಎಥೆನಾಲ್‌ ಕಡೆಗೆ ಗಮನ ನೀಡಿದೆ.