Saturday, 14th December 2024

ಆಗಸ್ಟ್‌ನಲ್ಲಿ ಎಥೆನಾಲ್‌ ಚಾಲಿತ ವಾಹನ ಬಿಡುಗಡೆ: ನಿತಿನ್ ಗಡ್ಕರಿ

ವದೆಹಲಿ: ಎಥೆನಾಲ್‌ನಲ್ಲಿ ಶೇ. 100 ರಷ್ಟು ಚಲಿಸುವ ಹೊಸ ವಾಹನಗಳನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.

ಆಗಸ್ಟ್‌ ತಿಂಗಳಲ್ಲಿ ಸಂಪೂರ್ಣವಾಗಿ ಎಥೆನಾಲ್‌ನಿಂದ ಚಲಿಸುವ ವಾಹನಗಳನ್ನು ಬಿಡುಗಡೆ ಮಾಡಲಾಗುವುದು. ಬಜಾಜ್, ಟಿವಿಎಸ್ ಮತ್ತು ಹೀರೋ ಕಂಪನಿಯ ಬೈಕ್‌ ಮತ್ತು ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಾಗುವುದು ಇವು ಶೇ. 100ರಷ್ಟು ಎಥೆನಾಲ್‌ ನಲ್ಲೇ ಚಲಿಸುತ್ತವೆ ಎಂದರು.

ಟೊಯೊಟಾ ಕಂಪನಿಯ ಕ್ಯಾಮ್ರಿ ಕಾರಿನಂತೆ ಶೇ.60ರಷ್ಟು ಪೆಟ್ರೋಲ್ ಹಾಗೂ ಶೇ.40 ರಷ್ಟು ವಿದ್ಯುತ್ ನಿಂದ ಚಲಿಸುತ್ತದೆ. ಟೊಯೊಟೊ ಕಂಪನಿಯು ಶೇ 60ರಷ್ಟು ಎಥೆ ನಾಲ್‌ ಹಾಗೂ ಶೇ 40ರಷ್ಟು ಎಲೆಕ್ಟ್ರಿಕ್‌ನೊಂದಿಗೆ ಚಲಿಸುವ ವಾಹನವನ್ನು ಬಿಡುಗಡೆ ಮಾಡಲಿದೆ. ಈ ಉಪಕ್ರಮವು ದೇಶದಲ್ಲಿ ಕ್ರಾಂತಿಯಾಗಲಿದೆ ಎಂದು ಹೇಳಿದರು.

ದೇಶದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದ ಅವರು, ನಾನು ಯಾವಾಗಲೂ ರಾಜಕೀಯವನ್ನು ಮೀರಿ ಕೆಲಸ ಮಾಡಿ ದ್ದೇನೆ ಮತ್ತು ಎಲ್ಲರಿಗೂ ನ್ಯಾಯವನ್ನು ಮಾಡುವುದನ್ನು ಬಿಜೆಪಿ ಕಲಿಸಿದೆ ಎಂದು ಪ್ರತಿಪಾದಿಸಿದರು.

ನಾನು ಬಿಜೆಪಿಯ ಕಾರ್ಯಕರ್ತ, ಆದರೆ ಸರ್ಕಾರ ದೇಶದ ಜನತೆಗೆ ಸೇರಿದ್ದು, ಅದಕ್ಕಾಗಿಯೇ ಪ್ರಧಾನಿ ಮೋದಿ ಅವರು ಸಬ್‌ಕಾ ಸಾಥ್ ಸಬ್‌ಕಾ ವಿಶ್ವಾಸ್ ಸಬ್‌ಕಾ ಪ್ರಾಯಸ್ ಎಂದು ಹೇಳಿದ್ದಾರೆ.

“ನನ್ನ 9 ವರ್ಷಗಳ ಅಧಿಕಾರದಲ್ಲಿ ನಾನು ರಾಜಕೀಯ ಚಿಂತನೆಗಳನ್ನು ಆಡಳಿತದೊಂದಿಗೆ ಬೆರೆಸಿಲ್ಲ ಎಂದು ಭರವಸೆ ನೀಡುತ್ತೇನೆ, ನಮ್ಮ ದೇಶದ ರಸ್ತೆಗಳು ನಮ್ಮ ಆಸ್ತಿ ಮತ್ತು ಈ ರಸ್ತೆಗಳಲ್ಲಿ ಸಂಚರಿಸುವ ಜನರು ನಮ್ಮ ಕುಟುಂಬ ಎಂದು ಅವರು ಹೇಳಿದರು.