Sunday, 15th December 2024

ಪಾಣಿಪತ್‌ನ ಎಥೆನಾಲ್ ಸ್ಥಾವರ ಇಂದು ರಾಷ್ಟ್ರಕ್ಕೆ ಸಮರ್ಪಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಪಾಣಿಪತ್‌ ನಲ್ಲಿರುವ 2 ನೇ ತಲೆಮಾರಿನ (2G) ಎಥೆನಾಲ್ ಸ್ಥಾವರವನ್ನು ಬುಧವಾರ ಸಂಜೆ ವಿಡಿಯೋ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇಂದು ವಿಶ್ವ ಜೈವಿಕ ಇಂಧನ ದಿನವಾಗಿದೆ.

ಸ್ಥಾವರದ ಸಮರ್ಪಣೆಯು ದೇಶದಲ್ಲಿ ಜೈವಿಕ ಇಂಧನಗಳ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಸರ್ಕಾರವು ವರ್ಷ ಗಳಿಂದ ತೆಗೆದುಕೊಂಡ ಕ್ರಮಗಳ ದೀರ್ಘ ಸರಣಿಯ ಭಾಗವಾಗಿದೆ.

ಇಂಧನ ಕ್ಷೇತ್ರವನ್ನು ಹೆಚ್ಚು ಕೈಗೆಟುಕುವ ಮತ್ತು ಸಮರ್ಥನೀಯವಾಗಿ ಪರಿವರ್ತಿಸುವ ಪ್ರಧಾನ ಮಂತ್ರಿಯವರ ನಿರಂತರ ಪ್ರಯತ್ನಕ್ಕೆ ಅನುಗುಣವಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

2ಜಿ ಎಥೆನಾಲ್ ಪ್ಲಾಂಟ್ ಅನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸುಮಾರು 900 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಪಾಣಿಪತ್ ರಿಫೈನರಿಗೆ ಸಮೀಪದಲ್ಲಿದೆ.  ಈ ಸ್ಥಾವರವು ಅತ್ಯಾಧುನಿಕ ಸ್ವದೇಶಿ ತಂತ್ರಜ್ಞಾನವನ್ನು ಹೊಂದಿದೆ. ಈ ಯೋಜನೆಯು ವಾರ್ಷಿಕವಾಗಿ ಸುಮಾರು 2 ಲಕ್ಷ ಟನ್‌ಗಳಷ್ಟು ಅಕ್ಕಿ ಹುಲ್ಲನ್ನು ಬಳಸಿಕೊಂಡು 3 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸುತ್ತದೆ.