Friday, 22nd November 2024

700 ಕಿಮೀ ಪ್ರಯಾಣಿಸಿದರೂ, ನೀಟ್‌ ಪರೀಕ್ಷೆ ಬರೆಯಲಾಗಲಿಲ್ಲ

ಕೋಲ್ಕತಾ: ಕಳೆದೊಂದು ವರ್ಷದಿಂದ ನೀಟ್‌ ಪರೀಕ್ಷೆ ಬರೆಯಲು ಸತತ ಅಧ್ಯಯನ ಮಾಡಿ ಪರೀಕ್ಷಾ ಕೇಂದ್ರಕ್ಕೆ ತೆರಳಲು 24 ಗಂಟೆಗಳಲ್ಲಿ 700 ಕಿಲೋ ಪ್ರಯಾಣ ಮಾಡಿದರೂ, ಅದೃಷ್ಟ ಈತನಿಗಿರಲಿಲ್ಲ. ಕಾರಣ, ಕೋವಿಡ್‌ ನಿಂದಾಗಿ ಹತ್ತು ನಿಮಿಷ ವಿಳಂಬವಾಗಿದೆ ಎಂದು ಪರೀಕ್ಷಾ ಮೇಲ್ವಿಚಾರಕರ ಸಬೂಬು.

ಘಟನೆ ನಡೆದಿದ್ದು ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತಾದಲ್ಲಿ. ಪರೀಕ್ಷೆ ಆರಂಭದ ಸಮಯ ಮಧ್ಯಾಹ್ನ ೨ ಗಂಟೆಯಾಗಿದ್ದರೂ, ೩೦ ನಿಮಿಷಗಳ ಮುನ್ನ ಕೇಂದ್ರದಲ್ಲಿರವುದು  ಕಡ್ಡಾಯವಾಗಿತ್ತು. ಆದರೆ ಬಿಹಾರದ ದರ್ಭಗಂಜ್‌ ಅಭ್ಯರ್ಥಿ ಸಂತೋಷ್ ಕುಮಾರ್‌ ಯಾದವ್ ಹತ್ತು ನಿಮಿಷ ತಡವಾಗಿ ಎಂದರೆ ೧.೪೦ ಕ್ಕೆ ತಲುಪಿದ್ದು, ಪರೀಕ್ಷೆ ಬರೆಯದಿರಲು ಕಾರಣವಾಯಿತು.

ಮಾಧ್ಯಮದ ಮುಂದೆ ತನ್ನ ಅಳಲು ತೋಡಿಕೊಂಡ ವಿದ್ಯಾರ್ಥಿ ನನ್ನ ಒಂದು ವರ್ಷ ನಷ್ಟವಾಯಿತ ಎಂದು ಹೇಳಿಕೊಂಡಿ ದ್ದಾನೆ. ಅವನೇ ಹೇಳುವಂತೆ, ದರ್ಭಂಗ್ ನಿಂದ ಬೆಳಿಗ್ಗೆ ೮ ಗಂಟೆಗೆ ಮುಜಾಫರ್‌ ನಗರ ತಲುಪಲು ಬಸ್‌ ಹತ್ತಿದೆ. ಅಲ್ಲಿಂದ ಪಾಟ್ನಾ ತಲುಪಲು ಮತ್ತೊಂದು ಬಸ್ಸಿನಲ್ಲಿ ಪ್ರಯಾಣ. ಇಲ್ಲಿ ಟ್ರಾಫಿಕ್‌ ಜಾಮ್‌ ನಿಂದಾಗಿ ಆರು ಗಂಟೆ ವಿಳಂಬವಾಗಿದೆ. ಪಾಟ್ನಾದಿಂದ ಕೋಲ್ಕತಾ ತಲುಪಲು ರಾತ್ರಿ ೯ ಗಂಟೆಗೆ ಬಸ್‌ ಹಿಡಿದು, ಸೀಲ್‌ಡಾಕ್ಕೆ ಮರುದಿನ ಮಧ್ಯಾಹ್ನ ೧.೬ ಕ್ಕೆ ತಲುಪಿದ್ದೇನೆ.

ಅಲ್ಲಿಂದ ಕಾರಿನ ಮೂಲಕ ಪರೀಕ್ಷಾ ಕೇಂದ್ರಕ್ಕೆ ತಲುಪಿದರೂ ಹತ್ತು ನಿಮಿಷದಿಂದ ಪರೀಕ್ಷೆ ಬರೆಯುವುದರಿಂದ ವಂಚಿತ ನಾಗಿದ್ದೇನೆ ಎಂದು ತಿಳಿಸಿದ್ದಾನೆ.