Saturday, 12th October 2024

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿಪಿಎಂಗೆ ಸೇರ್ಪಡೆ

ತಿರುವನಂತಪುರ: ಕೇರಳ ಕಾಂಗ್ರೆಸ್ ಪ್ರದೇಶ ಸಮಿತಿಯ (ಕೆಪಿಸಿಸಿ) ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಅನಿಲ್‌ಕುಮಾರ್ ಅವರು ಪಕ್ಷ ತೊರೆದು ಮಂಗಳವಾರ ಸಿಪಿಎಂಗೆ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್‌ನೊಂದಿಗಿನ ತಮ್ಮ 43 ವರ್ಷಗಳ ಸಂಬಂಧ ಕೊನೆಗೊಳಿಸುತ್ತಿರುವುದಾಗಿ, ಯಾವುದೇ ಷರತ್ತುಗಳಿಲ್ಲದೇ ಸಿಪಿಎಂಗೆ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಎಐಸಿಸಿಯು ಈಚೆಗೆ ಪಕ್ಷದ ಹೊಸ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿತ್ತು. ಈ ಬಗ್ಗೆ ಅಸಮಾಧಾನ ಹೊಂದಿದ್ದ ಅನಿಲ್‌ಕುಮಾರ್ ಬಹಿರಂಗವಾಗಿ ಹೊರಹಾಕಿದ್ದರು. ಪಕ್ಷವು ಅಶಿಸ್ತು ಎಂದು ಪರಿಗಣಿಸಿ ಅವರನ್ನು ಕೆಲಕಾಲ ಪಕ್ಷದಿಂದ ಅಮಾನತುಗೊಳಿಸಿತ್ತು.

ಅನಿಲ್‌ಕುಮಾರ್, ಪಕ್ಷಕ್ಕೆ ವಿವರಣೆ ನೀಡಿದ್ದರೂ ಅದು ತಮ್ಮ ಅಮಾನತನ್ನು ರದ್ದುಗೊಳಿಸಿಲ್ಲ. ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ತಾಲಿಬಾನ್ ಮಾದರಿಯಲ್ಲಿ ಪಕ್ಷದ ರಾಜ್ಯ ಘಟಕದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ ಎಂದು ದೂರಿ ರಾಜೀನಾಮೆ ಸಲ್ಲಿಸಿದ್ದರು.