Thursday, 12th December 2024

ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಫೋಟಕ ಪತ್ತೆ: ಮಹಿಳೆ ವಿಚಾರಣೆ

ಕೋಝಿಕ್ಕೋಡ್: ಕೋಝಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ.

ರೈಲ್ವೆ ವಿಭಾಗದ ಪೊಲೀಸರು ನಿಲ್ದಾಣ ಸುತ್ತಮುತ್ತ ಮತ್ತು ರೈಲ್ವೆ ಬೋಗಿಗಳಲ್ಲಿ ತಪಾಸಣೆ ಮಾಡುತ್ತಿರುವಾಗ 117 ಜೆಲಾಟಿನ್ ಕಡ್ಡಿಗಳು, 350 ಸ್ಫೋಟಕಗಳು ಚೆನ್ನೈ-ಮಂಗಳೂರು ಸೂಪರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚೆನ್ನೈ ಮೂಲದ ಮಹಿಳಾ ಪ್ರಯಾಣಿಕರೊಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಿಳೆ ಚೆನ್ನೈಯಿಂದ ತಲಶ್ಶೆರಿಗೆ ಹೊರಟಿದ್ದರು. ರೈಲಿನ ಡಿ1 ಬೋಗಿಯಲ್ಲಿ ಸ್ಫೋಟಕ ಪತ್ತೆಯಾಗಿದೆ.

ಕಟ್ಟಾಡಿಯಿಂದ ತಲೇಸ್ಸೆರಿಗೆ ಮಹಿಳೆ ರೈಲು ಸೀಟಿನ ಅಡಿ ಈ ಸ್ಪೋಟಕಗಳನ್ನು ಸಾಗಿಸುತ್ತಿದ್ದಳು. ಬಾವಿ ತೋಡಲು ಈ ಸ್ಪೋಟಕ ಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ ಎಂದು ವಿಚಾರಣೆ ವೇಳೆ ಮಹಿಳೆ ಹೇಳಿದ್ದಾಳೆ ಎಂದು ವರದಿಯಾಗಿದೆ.