Wednesday, 30th October 2024

Extreme Poverty: ಭಾರತದಲ್ಲಿ ಬಡತನ ನಿರ್ಮೂಲನೆಯಾಗುತ್ತಿದೆ ಎಂದಿದೆ ವಿಶ್ವಸಂಸ್ಥೆ

Extreme Poverty

ಭಾರತದಲ್ಲಿ (India) ಬಡತನದಲ್ಲಿ (Extreme Poverty) ವಾಸಿಸುತ್ತಿರುವವ ಸಂಖ್ಯೆ ಗಣನೀಯವಾಗಿ ಇಳಿಕೆ ಯಾಗಿರುವುದನ್ನು 2024ರ ಅಂಕಿ ಅಂಶ ಹೇಳಿದೆ. ಇದರ ಪ್ರಕಾರ 2024ರಲ್ಲಿ ಸುಮಾರು 12.9 ಕೋಟಿ ಜನರು ದಿನಕ್ಕೆ ಸುಮಾರು 181 ರೂ. ಗಿಂತಲೂ ಕಡಿಮೆ ಆದಾಯ ಹೊಂದಿದ್ದು, ಬಡತನದಲ್ಲೇ (Poverty) ವಾಸಿಸುತ್ತಿದ್ದಾರೆ ಎಂದು ವಿಶ್ವ ಬ್ಯಾಂಕ್ (World Bank ) ಹೇಳಿದೆ.

ಅಂಕಿ ಅಂಶಗಳ ಪ್ರಕಾರ 1990ರಲ್ಲಿ ಭಾರತದಲ್ಲಿ 43.1 ಕೋಟಿ ಜನರು ಬಡತನದಲ್ಲಿದ್ದರು. ಆದರೆ ಆಗ ದಿನಕ್ಕೆ ಹೆಚ್ಚಿನ ಜನರು ಸುಮಾರು 576 ರೂ. ಗಿಂತ ಕಡಿಮೆ ಆದಾಯ ಹೊಂದಿದ್ದಾರೆ.

1990ಕ್ಕಿಂತ 2024ರಲ್ಲಿ ಮಧ್ಯಮ- ಆದಾಯದ ದೇಶಗಳಿಗೆ ಬಡತನದ ಮಿತಿ ಹೆಚ್ಚಿನ ಮಾನದಂಡವನ್ನು ಹೊಂದಿದೆ. ಇದು ಜನಸಂಖ್ಯೆಯ ಬೆಳವಣಿಗೆಯನ್ನು ಆಧರಿಸಿದೆ. 2021ರಲ್ಲಿ ತೀವ್ರ ಬಡತನದ ಪ್ರಮಾಣ 38 ಕೋಟಿ ಜನರಲ್ಲಿ 16.74 ಕೋಟಿ ಇಳಿಕೆಯಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಇತ್ತೀಚೆಗೆ ಬಿಡುಗಡೆಯಾದ 2022-23ರ ಈ ಹೊಸ ಅಂಕಿ ಅಂಶಗಳು ಗೃಹ ಬಳಕೆ ಮತ್ತು ವೆಚ್ಚ ಸಮೀಕ್ಷೆಯ (HCES) ಅಂಶಗಳನ್ನು ಪರಿಗಣಿಸಲಾಗಿಲ್ಲ. ಯಾಕೆಂದರೆ ಅಗತ್ಯ ವಿಶ್ಲೇಷಣೆಯನ್ನು ಸಮಯಕ್ಕೆ ಇದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಆಫ್ರಿಕಾ ಸೇರಿದಂತೆ ಬಡ ದೇಶಗಳಲ್ಲಿ ತೀವ್ರ ಬಡತನದ ಪ್ರಮಾಣವನ್ನು 2030ರ ವೇಳೆಗೆ ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದೆ.

ಕೋವಿಡ್ ಸಾಂಕ್ರಾಮಿಕ, ಆರ್ಥಿಕ ಹಿಂಜರಿತ ಕಳೆದು ಒಂದು ದಶಕದಲ್ಲಿ ಬಡತನ ಪ್ರಮಾಣದ ಮೇಲೂ ಪರಿಣಾಮ ಬೀರಿತ್ತು. ಆದರೆ ಪ್ರಸ್ತುತ ಪ್ರಗತಿಯ ವೇಗವು ತೀವ್ರ ಬಡತನವನ್ನು ನಿರ್ಮೂಲನೆ ಮಾಡಲು ಇನ್ನೊಂದು ದಶಕಗಳನ್ನು ತೆಗೆದುಕೊಳ್ಳಲಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಕಡಿಮೆಯಾಗಲಿದೆ ಬಡತನ

ಜಾಗತಿಕ ತೀವ್ರ ಬಡತನಕ್ಕೆ ಭಾರತದ ಕೊಡುಗೆ ಮುಂದಿನ ದಶಕದಲ್ಲಿ ಗಣನೀಯವಾಗಿ ಕುಸಿಯಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ಇದು ತಲಾ ಜಿಡಿಪಿ ಬೆಳವಣಿಗೆಯನ್ನು ಆಧರಿಸಿದೆ. 2030ರಲ್ಲಿ ಭಾರತದಲ್ಲಿನ ತೀವ್ರ ಬಡತನದ ದರವನ್ನು ಶೂನ್ಯಕ್ಕೆ ನಿಗದಿಪಡಿಸಿದ್ದರೂ ಸಹ 2030ರಲ್ಲಿ ಜಾಗತಿಕ ತೀವ್ರ ಬಡತನದ ದರವು ಕೇವಲ ಶೇ. 7.31 ರಿಂದ ಶೇ. 6.72ಕ್ಕೆ ಇಳಿಯಲಿದೆ. ಇದು ನಿಗದಿತ ಗುರಿ ಶೇ. 3ಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಿದೆ.

Indian Railways : ಪ್ರಯಾಣಿಕರೇ ಗಮನಿಸಿ; ರೈಲ್ವೆ ಟಿಕೆಟ್‌ ಬುಕಿಂಗ್ ನಿಯಮದಲ್ಲಿ ಬದಲಾವಣೆ!

ಜಾಗತಿಕವಾಗಿ ಬಡತನದ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದ್ದರೂ ಭಾರತದಲ್ಲಿ ಹಿಂದಿನ ಎರಡು ವರ್ಷಗಳಲ್ಲಿ ಬಡತನ ಪ್ರಮಾಣ 38 ಕೋಟಿ ಕಡಿಮೆಯಾಗಿದೆ. ಇದು ಮುಂದಿನ ದಶಕದಲ್ಲಿ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.