ಒಂದು ವೇಳೆ ನಿಮ್ಮ ಜಾತಕದಲ್ಲಿ ನೀವು ಜೈಲು ಸೇರುತ್ತೀರಿ ಅಥವಾ ಬಂಧನವಾಗುವ ಸಾಧ್ಯತೆಯಿದ್ದರೆ ನಿಮ್ಮ ಜೈಲಿನ ದೋಷಕ್ಕೆ ಪರಿಹಾರವಾಗಿ ಒಂದು ದಿನಕ್ಕೆ ಬಾಡಿಗೆ ರೂಪದಲ್ಲಿ 500 ರೂ. ಕೊಟ್ಟು ಜೈಲುಶಿಕ್ಷೆ ಅನುಭವಿಸಬಹುದು.!
ಉತ್ತರಾಖಂಡದ ಹಲ್ದ್ವಾನಿ ಜೈಲು ಈ ದೋಷ ಪರಿಹರಿಸಿಕೊಳ್ಳಲು ಅವಕಾಶ ನೀಡಿದೆ. ಈ ರೀತಿ ಬಾಡಿಗೆ ಕೊಟ್ಟು ಜೈಲಿನಲ್ಲಿರಲು ಅವಕಾಶ ನೀಡಿದ ದೇಶದ ಮೊದಲ ಜೈಲು ಇದಾಗಿದೆ.
ಒಂದು ವೇಳೆ ಜಾತಕದಲ್ಲಿ ʼಬಂಧನ ದೋಷʼವಿದ್ದರೆ ಅವರು ಜೈಲಿನಲ್ಲಿ ದಿನಕ್ಕೆ 500 ರೂ. ಕೊಟ್ಟು ಇರಬಹುದು. ಅಂಥವರಿಗೆ ಜೈಲಿನ ಹಳೆಯ ವಿಭಾಗದಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗುತ್ತದೆ. ಈ ವ್ಯವಸ್ಥೆಗೆ ಪ್ರಧಾನ ಕಚೇರಿಯಿಂದ ಅನುಮತಿ ಪಡೆಯ ಬೇಕೆಂದು ಜೈಲಿನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.