ದೆಹಲಿ: ಕಾರಿನಲ್ಲಿ ಒಬ್ಬರೇ ಪ್ರಯಾಣಿಸಿದರೂ ಫೇಸ್ ಮಾಸ್ಕ್ ಅನಿವಾರ್ಯ ಎಂದು ದೆಹಲಿ ಹೈಕೋರ್ಟ್ ತೀರ್ಪೊಂದನ್ನ ನೀಡಿದೆ.
ಫೇಸ್ ಮಾಸ್ಕ್ ಒಂದು ಸುರಕ್ಷಾ ಕವಚದಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಕೊರೊನಾ ಹರಡುವಿಕೆಯನ್ನ ಕಡಿಮೆ ಮಾಡಬಹುದಾಗಿದೆ. ಖಾಸಗಿ ಕಾರುಗಳಲ್ಲಿ ಓರ್ವ ವ್ಯಕ್ತಿ ಇದ್ದರೂ ಮಾಸ್ಕ್ನ್ನ ಧರಿಸಲೇಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಖಾಸಗಿ ವಾಹನಗಳಲ್ಲಿ ಒಬ್ಬರೇ ಓಡಾಡು ವಾಗ ಮಾಸ್ಕ್ ಧರಿಸದ ಕಾರಣಕ್ಕೆ ದೆಹಲಿ ಸರ್ಕಾರ ವಿಧಿಸುತ್ತಿರುವ ದಂಡದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ