Thursday, 12th December 2024

ಕಾರಲ್ಲಿ ಒಬ್ಬರೇ ಪ್ರಯಾಣಿಸಿದರೂ ಫೇಸ್‌ ಮಾಸ್ಕ್​ ಬಳಸಿ: ದೆಹಲಿ ಹೈಕೋರ್ಟ್

ದೆಹಲಿ: ಕಾರಿನಲ್ಲಿ ಒಬ್ಬರೇ ಪ್ರಯಾಣಿಸಿದರೂ ಫೇಸ್‌ ಮಾಸ್ಕ್​ ಅನಿವಾರ್ಯ ಎಂದು ದೆಹಲಿ ಹೈಕೋರ್ಟ್ ತೀರ್ಪೊಂದನ್ನ ನೀಡಿದೆ.

ಫೇಸ್​ ಮಾಸ್ಕ್​ ಒಂದು ಸುರಕ್ಷಾ ಕವಚದಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಕೊರೊನಾ ಹರಡುವಿಕೆಯನ್ನ ಕಡಿಮೆ ಮಾಡಬಹುದಾಗಿದೆ. ಖಾಸಗಿ ಕಾರುಗಳಲ್ಲಿ ಓರ್ವ ವ್ಯಕ್ತಿ ಇದ್ದರೂ ಮಾಸ್ಕ್​ನ್ನ ಧರಿಸಲೇಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್​​ ಖಾಸಗಿ ವಾಹನಗಳಲ್ಲಿ ಒಬ್ಬರೇ ಓಡಾಡು ವಾಗ ಮಾಸ್ಕ್​ ಧರಿಸದ ಕಾರಣಕ್ಕೆ ದೆಹಲಿ ಸರ್ಕಾರ ವಿಧಿಸುತ್ತಿರುವ ದಂಡದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily